ಪಕ್ಷ ವಿರೋಧ ಚಟುವಟಿಕೆಗಳಲ್ಲಿ ಶಾಮೀಲಾದ 24 ಬಿಜೆಪಿ ಸದಸ್ಯರ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

bjp

ಅಹಮದಾಬಾದ್, ಡಿ.2-ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹೈವೋಲ್ಟೇಜ್ ಗುಜರಾತ್ ವಿಧಾನಸಭಾ ಚುನಾವಣೆ ಕಾವು ಏರತೊಡಗಿದ್ದು, ಈ ನಡುವೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾದ ಆರೋಪಗಳಿಗಾಗಿ ತನ್ನ 24 ಸದಸ್ಯರನ್ನು ಬಿಜೆಪಿ ರಾಜ್ಯ ಘಟಕ ಅಮಾನತುಗೊಳಿಸಿದೆ. ಮಾಜಿ ಸಂಸದರಾದ ಭೂಪೇಂದ್ರ ಸಿನ್ಹಾ ಪ್ರಭಾತ್‍ಸಿನ್ಹಾ ಸೋಳಂಕಿ, ಕನ್ಯೆ ಪಟೇಲ್ ಮತ್ತು ಬಿಮಲ್ ಶಾ ಸೇರಿದಂತೆ 24 ಸದಸ್ಯರುಗಳನ್ನು ಬಿಜೆಪಿ ಸಸ್ಪೆಂಡ್ ಮಾಡಿದೆ. ಇವರನ್ನು ಅಮಾನತುಗೊಳಿಸುವುದು ಪಕ್ಷದ ಪೂರ್ವಯೋಜಿತ ಕ್ರಮವಾಗಿವೆ ಎಂದು ಹೇಳಲಾಗಿದೆ.

ಗುಜರಾತ್‍ನಲ್ಲಿ ಡಿ.9 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ನ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಎರಡು ಚುನಾವಣಾಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin