ಪಟಾಕಿಗಳಿಗೂ ಬಂತು ಕರೀನಾ, ಬೆನ್‌ಟನ್ ಚಿತ್ರದ ಮೆರಗು

ಈ ಸುದ್ದಿಯನ್ನು ಶೇರ್ ಮಾಡಿ

fire
ನವದೆಹಲಿ, ಅ. 23- ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಪಟಾಕಿಗಳ ಮಾರಾಟ ಭರಾಟೆ ಜೋರಾಗುವುದು ಸರ್ವೇಸಾಮಾನ್ಯ. ಆ ಪಟಾಕಿಗಳ ಮೆರುಗನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಲು ನಾನಾ ರೀತಿಯ ಕಸರತ್ತನ್ನು ನಡೆಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳನ್ನು ಸೆಳೆಯುವುದಕ್ಕಾಗಿಯೇ ಸುರ್‌ಸುರ್ ಬತ್ತಿ, ಪ್ಲವರ್‌ಪಾಟ್‌ಗಳ ಮೇಲೆ ಕಾರ್ಟೂನ್‌ಗಳ ಚಿತ್ರಗಳನ್ನು ಬಳಸುತ್ತಿದ್ದರು. ಅದರಂತೆಯೇ ಈ ಬಾರಿಯು ಟಿವಿ ಮಾಧ್ಯಮಗಳ ಮೂಲಕ ಈಗಾಗಲೇ ಮಕ್ಕಳ ಮನ ಸೂರೆಗೊಂಡಿರುವ ಬೆನ್‌ಟನ್, ಎಕ್ಸ್‌ಮನ್, ಚೋಟಾಭೀಮ್, ಡೋರಾ ಸೇರಿದಂತೆ ಮತ್ತಿತರ ಚಿತ್ರಗಳನ್ನು ಪಟಾಕಿಗಳ ಬಾಕ್ಸ್ ಮೇಲೆ ಮುದ್ರಿಸುವ ಮೂಲಕ ಚಿಣ್ಣರ ಗಮನವನ್ನು ಸೆಳೆಯುತ್ತಿದ್ದಾರೆ.

ಮಕ್ಕಳನ್ನು ಸೆಳೆಯಲು ಈ ರೀತಿಯ ಟ್ರಿಕ್ಸ್ ಆದರೆ, ಯುವಕರನ್ನು ಸೆಳೆಯಲು ಕರೀನಾಕಪೂರ್, ಜಾಕಿಚಾನ್, ವೈಜಯಂತಿ ಮಾಲಾ, ಧರ್ಮೇಂದ್ರ, ಹೇಮಾಮಾಲಿನಿಯರ ಚಿತ್ರಗಳನ್ನು ಮುದ್ರಿಸುವ ಮೂಲಕ ದೆಹಲಿಯ ಬೀದಿ ಬೀದಿಗಳಲ್ಲಿ ಪಟಾಕಿ ಪ್ರೇಮಿಗಳನ್ನು ಸೆಳೆಯುತ್ತಿದ್ದಾರೆ. ಚಿಕ್ಕಮಕ್ಕಳು ಸೆಳೆಯುವುದಕ್ಕಾಗಿ ನಾವು ಈ ಬಾರಿ ಟೀವಿ ಹಾಗೂ ಸಿನಿಮಾಗಳಲ್ಲಿ ಮಕ್ಕಳನ್ನು ಸೆಳೆದಿರುವ ಕಾರ್ಟೂನ್ ಚಿತ್ರಗಳನ್ನು ಬಳಸುತ್ತಿದ್ದೇವೆ ಎಂದು ಉದ್ಯಮಿ ಆರ್.ಎಸ್.ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಾಲಿವುಡ್ ಚಿತ್ರಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಕೆಲವು ದಿಗ್ಗಜರನ್ನು ಹಬ್ಬದ ವೇಳೆ ಸ್ಮರಿಸಿಕೊಳ್ಳುವ ಸಲುವಾಗಿ ವೈಜಯಂತಿ ಮಾಲಾ, ಧರ್ಮೇಂದ್ರ, ಹೇಮಾಮಾಲಿನಿರ ಚಿತ್ರಗಳನ್ನು ಬಳಸುತ್ತಿದ್ದೇವೆ ಎಂದು ಚೌರೀ ಬಜಾರ್‌ನ ಪಟಾಕಿ ಅಂಗಡಿ ಮಾಲೀಕ ಮುಖೇಶ್ ತಿಳಿಸಿದ್ದಾರೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ ಅದರ ರಂಗನ್ನು ಮತ್ತಷ್ಟು ಹೆಚ್ಚಿಸಲು ಚಿಣ್ಣರು, ಯುವಕರು ಸೇರಿದಂತೆ ಎಲ್ಲಾ ವಯೋಮಾನದವರು ಪಟಾಕಿಯನ್ನು ಸಿಡಿಸುತ್ತಾರೆ. ಆ ಪಟಾಕಿಗಳ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಈ ರೀತಿಯ ಐಡಿಯಾವನ್ನು ಬಳಸುತ್ತಿದ್ದೇವೆ ಎಂದು ರಾಜ್ ಕೌಶಿಲ್ ಎಂಬ ಮತ್ತೊಬ್ಬ ವ್ಯಾಪಾರಿ ತಿಳಿಸಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin