ಪಟಾಕಿ ದುಷ್ಪರಿಣಾಮಗಳ ಅರಿವು ಮೂಡಿಸಲು ಜಾಥ

ಈ ಸುದ್ದಿಯನ್ನು ಶೇರ್ ಮಾಡಿ

pataki

ಚನ್ನಪಟ್ಟಣ, ಅ.26-ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಆಗುವ ಭೀಕರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ನಾಳೆ ಶಾಲಾ ಮಕ್ಕಳಿಂದ ನಗರದ ಸರ್‍ಮಿರ್ಜಾ ಇಸ್ಮಾಯಿಲ್ (ಡ್ಯೂಂ ಲೈಟ್ ಸರ್ಕಲ್) ವೃತ್ತದಿಂದ ಬೃಹತ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಸಂಚಾಲಕ ವಿ.ವೆಂಕಟಸುಬ್ಬಯ್ಯ ತಿಳಿಸಿದ್ದಾರೆ.ಬಾಲು ಸಮೂಹ ಶಿಕ್ಷಣಸಂಸ್ಥೆ, ಲಯನ್ಸ್‍ಸಂಸ್ಥೆ, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆ, ಬೆಂಗಳೂರು ಪಬ್ಲಿಕ್ ಸ್ಕೂಲ್ ದಿವ್ಯಚೇತನ ಸ್ಕೂಲ್ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಪಟಾಕಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಜಾಥಕ್ಕೆ ಪೊಲೀಸ್ ಉಪವಿಭಾಗಾಧಿಕಾರಿ ಆರ್.ಸಿ.ಲೋಕೇಶ್ ಚಾಲನೆ ನೀಡಲಿದ್ದು ಮಕ್ಕಳ ಜಾಥ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪಟಾಕಿಯ ನಿಷೇಧ ನಮ್ಮೆಲ್ಲರ ಹೊಣೆ ಎಂದು ಸಾರ್ವಜನಿಕರಿಗೆ ಸಾರಿ ಹೇಳಲಿದ್ದಾರೆ.ಈ ಮಕ್ಕಳ ಜಾಥಕ್ಕೆ ಸಂಘಸಂಸ್ಥೆಗಳು ಪ್ರಗತಿಪರ ಚಿಂತಕರು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin