ಪಟಾಕಿ ಮಾರುಕಟ್ಟೆಯಲ್ಲಿ ಸರ್ಜಿಕಲ್ ಸ್ಟ್ರೈಕ್, ಮಾಯಾವತಿ ಬಾಂಬ್, ಎಸ್ಪಿ ರಾಕೆಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

Mayavathi

ಲಖನೌ, ಅ.30– ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೀಪಾವಳಿ ಹಬ್ಬದ ಪಟಾಕಿ ಮಾರುಕಟ್ಟೆಯಲ್ಲಿಯೂ ಖ್ಯಾತ ರಾಜಕೀಯ ನೇತಾರರ ಹೆಸರಿನ ಸಿಡಿಮದ್ದು, ಬಾಣ-ಬಿರುಸುಗಳ ಮಾರಾಟ ಭರಾಟೆಯಿಂದ ಸಾಗಿದೆ.  ಸಮಾಜವಾದಿ ರಾಕೆಟ್ಸ್ ಪಟಾಕಿ ಬಾಕ್ಸ್ ಮೇಲೆ ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂಸಿಂಗ್ ಯಾದವ್, ಎಸ್ಪಿ ಮುಖಂಡ ಅಮರ್‍ಸಿಂಗ್ ಅವರಿಗೆ ಸಿಹಿ ತಿನ್ನಿಸುವ ಫೋಟೋ ರಾರಾಜಿಸುತ್ತಿದೆ. ಫೈರ್ ಬ್ರಾಂಡ್ ಖ್ಯಾತಿಯ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯವರ ಹೆಸರಿನ ಪಟಾಕಿಯೂ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಪಟಾಕಿ ಹೆಸರು ಮಾಯಾವತಿ ಬಾಂಬ್ (ಆನೆ ಪಟಾಕಿ ಬದಲಿಗೆ?).

1,000 ಸರಗಳ ಪಟಾಕಿ ಬಾಕ್ಸ್‍ಗೆ ಅಖಿಲೇಶ್ ಕಿ ಲಾರಿ ಅನ್‍ಲಿಮಿಟೆಡ್ ಎಂದು ಹೆಸರಿಸಲಾಗಿದೆ. ಅಮರ್ ಸಿಂಗ್ ಕಿ ಫುಲ್ಜರಿ, ಸರ್ಜಿಕಲ್ ಸ್ಟ್ರೈಕ್ ಮೊದಲಾದ ಹೆಸರಿನ ಪಟಾಕಿಗಳು ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿವೆ.  ವಿಧಾನಸಭೈ ಚುನಾವಣೆಗೆ ಮುನ್ನವೇ ಸಮಾಜವಾದಿ ಪಕ್ಷದಲ್ಲಿ ಯಾದವೀ ಕಲಹವನ್ನು ಕೊನೆಗಾಣಿಸಲು ತೀವ್ರ ಕಸರತ್ತು ನಡೆಯುತ್ತಿದೆ. ತಮ್ಮ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದರೂ, ಯಾದವ್ ಕುಟುಂಬ ಜೊತೆಯಾಗಿ ಕಲೆತು-ಬೆರೆತು ದೀಪಾವಳಿ ಹಬ್ಬ ಆಚರಿಸಿದ್ದು ವಿಶೇಷ.

► Follow us on –  Facebook / Twitter  / Google+

Facebook Comments

Sri Raghav

Admin