ಪಟ್ಟಭದ್ರರ ಕೈಗೊಂಬೆಗಳಾಗುತ್ತಿರುವ ಮಾಧ್ಯಮಗಳು : ಸಿಎಂ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Madyama-Academy

ಬೆಂಗಳೂರು,ಮಾ.12- ಮಾಧ್ಯಮಗಳು ಪಟ್ಟಭದ್ರರ ಕೈಗೊಂಬೆಗಳಂತೆ ಕುಣಿಯುತ್ತಿರುವುದು ಅತ್ಯಂತ ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಪರ್ತಕರ್ತರು ಸುಳ್ಳು ಸುದ್ದಿಗಳನ್ನೇ ವೈಭವೀಕರಿಸಿ ವಿಜೃಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿವಿಮಾತು ಹೇಳಿದರು. ವಿದ್ಯುನ್ಮಾನ ಮಾಧ್ಯಮಗಳೇ (ಟಿವಿ ಚಾನೆಲ್‍ಗಳು) ನ್ಯಾಯಾಲಯಗಳಾಗಿ, ನಿರೂಪಕರೇ ನ್ಯಾಯಧೀಶರು, ಪೊಲೀಸ್ ಇಲಾಖೆಯಾಗಿ  ವರ್ತಿಸುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಎತ್ತಿ ತಂದು ಅವುಗಳನ್ನೇ ಸತ್ಯದಂತೆ ಬಿಂಬಿಸಿ ಪ್ರಸಾರ ಮಾಡುತ್ತಿವೆ. ವಿಪಕ್ಷಗಳು ಮಾಡುವ ಹುರುಳಿಲ್ಲದ ಆರೋಪಗಳನ್ನೇ ವೈಭವೀಕರಿಸಿ ಜನರ ಮುಂದಿಟ್ಟು ಪರ್ತಕರ್ತರು ಆತ್ಮವಂಚನೆ ಮಾಡಿಕೊಳ್ಳುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದಕ್ಕೆ ಡೈರಿ ವಿಷಯವೇ ಸಾಕ್ಷಿ ಎಂದರು. [ ‘ಈ ಸಂಜೆ’ಯ ಹಿರಿಯ ಪತ್ರಕರ್ತ ರಾಮಸ್ವಾಮಿ ಕಣ್ವ ಸೇರಿ 15 ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ   ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಕಾರಣಗಳಿಂದ ಕೇವಲ ಹತ್ತೇ ನಿಮಿಷಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಿ ವೇದಿಕೆಯಿಂದ ನಿರ್ಗಮಿಸಿದರು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿಯವರ ಭಾಷಣದ ಪ್ರತಿಯನ್ನು ಓದಿದರು. ಈ ಸಂಜೆಯ ಹಿರಿಯ ವರದಿಗಾರರಾದ ವಿ.ರಾಮಸ್ವಾಮಿ ಕಣ್ವ ಸೇರಿದಂತೆ 15 ಮಂದಿ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತರ ಪ್ರಶಸ್ತಿ ಪುರಸ್ಕøತರು ಎಚ್.ಆರ್.ಶ್ರೀಷ, ಶಾಂತಲಾ ಧರ್ಮರಾಜ್, ಜಿ.ವೀರಣ್ಣ, ಮಹಮ್ಮದ್ ಸಿದ್ದಿಕಿ ಅಲ್ದೂರಿ, ರೊನಾಲ್ಡ್ ಅನಿಲ್ ಫರ್ನಾಂಡಿಸ್, ಚಿ.ನಿ.ಪುರುಷೋತ್ತಮ, ಎ.ಸಿ.ಪ್ರಭಾಕರ್, ಉಜನಿ ರುದ್ರಪ್ಪ, ಹೇಮಂತಕುಮಾರ್, ಶಂಕರಪ್ಪ ಹುಸನಪ್ಪ ಛಲವಾದಿ, ನಾಗರಾಜ್ ಸೊಣಗಾರ, ಅನಿಲ್‍ಕುಮಾರ ಚಂದ್ರಶೇಖರ ಹೊಸಮನಿ, ಮಾಲತೇಶ ಗದಿಗೆಪ್ಪ ಅಂಗೋರ ಮತ್ತು ಕೆ.ಎಚ್.ಚಂದ್ರು (ಹೇಮಚಂದ್ರ ನಾಯಕ).

ಅದೇ ರೀತಿ ಅಭಿಮಾನಿ ಸಂಸ್ಥೆ ನೀಡುವ ಅಭಿಮಾನಿ ಪ್ರಶಸ್ತಿ ಮತ್ತು ನೂತನವಾಗಿ ಸ್ಥಾಪಿಸಿರುವ ಅರಗಿಣಿ ಪ್ರಶಸ್ತಿಗಳನ್ನು ಕ್ರಮವಾಗಿ ಚಂದ್ರಶೇಖರ ಮೋರೆ ಮತ್ತು ಸ್ನೇಹಪ್ರಿಯ ನಾಗರಾಜ್ ಅವರುಗಳಿಗೆ ನೀಡಲಾಯಿತು.  ವೈಯಕ್ತಿಕ ಪ್ರಶಸ್ತಿ ಪಡೆದ ಇತರೆ ಗಣ್ಯರೆಂದರೆ ಹಿರಿಯ ಅಂಕಣಕಾರ ನಟರಾಜ್ ಹುಳಿಯಾರ್, ಸಿ.ಜೆ.ರಾಜೀವ ಅವರು. ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಯನ್ನು ಶಿವಮೊಗ್ಗ ಟೈಮ್ಸ್ ಪತ್ರಿಕೆಗೆ ನೀಡಲಾಯಿತು. ಮೂಲ ಸೌಲಭ್ಯ ಅಭಿವೃದ್ಧಿ ಮತ್ತು ಹಜ್ ಸಚಿವ ರೋಷನ್ ಬೇಗ್ ಉಪಸ್ಥಿತರಿದ್ದರು. ಮಾಧ್ಯಮ ಅಕಾಡೆಮಿ ಸದಸ್ಯ ರುದ್ರಣ್ಣ ಹರ್ತಿಕೋಟೆ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಆಶಯ ಭಾಷಣ ಮಾಡಿದರು. ಇತರೆ ಸದಸ್ಯರಾದ ಶಿವಕುಮಾರ್, ಮುತ್ತು ನಾಯ್ಕರ್, ರಂಗಣ್ಣ ಟಿ.ಎಸ್., ಬಿ.ವೆಂಕಟಸಿಂಗ್, ಕಾರ್ಯದರ್ಶಿ ಎಸ್.ಶಂಕರಪ್ಪ , ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin