ಪಠಾಣ್‍ಕೋಟ್‍ನಲ್ಲಿ ಉಗ್ರರ ಕಾರು ಪತ್ತೆ, ತೀವ್ರ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Pathankot-01

ಪಠಾಣ್‍ಕೋಠ್(ಪಂಜಾಬ್) ಡಿ.15- ಇಲ್ಲಿಗೆ ಸಮೀಪದ ಫರ್‍ಫಲ್ ಗ್ರಾಮದ ಬಳಿ ಭಯೋತ್ಪಾದಕರಿಗೆ ಸೇರಿದ್ದು ಎನ್ನಲಾದ ಕಾರೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.  ಜಮ್ಮು ಮತ್ತು ಕಾಶ್ಮೀರ ನೋಂದಣಿ ಸಂಖ್ಯೆ ಹೊಂದಿರುವ ಈ ಕಾರು ನಿನ್ನೆ ರಾತ್ರಿ ಗ್ರಾಮದ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ಈ ಕಾರನ್ನು ಬೆನ್ನಟ್ಟಿದರು. ಆದರೆ ಅದರಲ್ಲಿದ್ದವರು ಸ್ವಲ್ಪ ದೂರ ತೆರಳಿ ಕಾರ್‍ಗೆ ಲಾಕ್ ಮಾಡಿ ಪರಾರಿಯಾಗಿದ್ದಾರೆ. ಇದು ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಸೇರಿದ ಕಾರು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಶಂಕಿತ ಉಗ್ರರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪಠಾಣ್‍ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕೌಶಲ್ ತಿಳಿಸಿದ್ದಾರೆ. ಪಠಾಣ್‍ಕೋಟ್ ಭಾರತೀಯ ವಾಯು ಪಡೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

Eesanje News App

 

Facebook Comments

Sri Raghav

Admin