ಪಡಿತರ ವ್ಯವಸ್ಥೆಯಿಂದ ಬಡಜನತೆ ವಂಚಿತರಾಗಬಾರದು : ಯು.ಟಿ.ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

ut khadar

ವಿಜಯಪುರ, ಆ.12- ರಾಜ್ಯದಲ್ಲಿ ಯಾವುದೇ ಬಡಜನತೆ ಸರಕಾರದ ಅನ್ನಭಾಗ್ಯ ಯೋಜನೆಯ ಪಡಿತರ ವ್ಯವಸ್ಥೆಯಿಂದ ವಂಚಿತರಾಗಬಾರದೆಂಬ ಉದ್ದೇಶಕ್ಕಾಗಿ ಬಿಪಿಎಲ್ ಪಡಿತರ ಚೀಟಿ ನೀಡುವಿಕೆಯ ನಿಯಮಗಳನ್ನು ಸಡಿಲಿಸಿದ್ದು, ಇದರಿಂದ ಬಡ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು.

ತಾಲ್ಲೂಕಿನ ತಿಮ್ಮಹಳ್ಳಿಯ ಶಿವ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಬಿಪಿಎಲ್ ಪಡಿತರ ಚೀಟಿ ಪಡೆಯಲು 14 ನಿಯಮಗಳಿದ್ದು, ಪಡಿತರ ಚೀಟಿ ಪಡೆಯಲು ಬಡಜನತೆ ಸಾಕಷ್ಟು ಪರದಾಡಬೇಕಾಯಿತು. ಆದರೆ ಈಗ ಅದನ್ನು ಸಡಿಲಿಸಲಾಗಿದೆ ಎಂದರು.ಆಧಾರ್ ಕಾರ್ಡ್ ಮಾದರಿಯಲ್ಲಿಯೇ ಸ್ಪೀಡ್ ಪೋಸ್ಟ್  ಮೂಲಕ ಪಡಿತರ ಚೀಟಿಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಹಲವೆಡೆ ಪ್ರತಿ ತಿಂಗಳ ಪಡಿತರ ವಿತರಿಸಲು ಕೂಪನ್ ಪದ್ದತಿ ಜಾರಿಗೆ ತಂದಿದ್ದು, ಇದರಿಂದ ಹಲವಾರು ತೊಂದರೆ ಗ್ರಾಹಕರಿಗೆ ತಪ್ಪುವುದರೊಂದಿಗೆ ರಾಜ್ಯದ ಎಲ್ಲಿಯೇ ಆದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಅವರ ಪಡಿತರವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪಕ್ಷದ ಮಾನವ ಹಕ್ಕುಗಳ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರೀಶ್ ಮತ್ತಿತರರು ಹಾಜರಿದ್ದರು.ಇದೇ ವೇಳೆ ಜಂಗ್ಲಿ ಪಿರ್ ದರ್ಗಾಗೆ ಭೇಟಿ ನೀಡಿದ ಸಚಿವರಿಗೆ ಎಸ್.ಆರ್.ಜಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

 

 

► Follow us on –  Facebook / Twitter  / Google+

Facebook Comments

Sri Raghav

Admin