ಪತಂಜಲಿ ಹೆಸರಿನಲ್ಲಿ ನಕಲಿ ಚೆಕ್ ನೀಡಿ ವಂಚಿಸಿದ್ದ ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

mandhuru

ಮದ್ದೂರು, ಫೆ.8- ಪತಂಜಲಿ ಆರ್ಯುವೇದ ಸಂಸ್ಥೆಯ ಹೆಸರಿನಲ್ಲಿ ನಕಲಿ ಚೆಕ್ ನೀಡಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪಾರಿಗಳಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದ ಐವರು ವಂಚಕರನ್ನು ಪೊಲೀಸರು ಬಂಧಿಸದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣದ ಬಿ.ಶಿವಕುಮಾರ್ (41), ನಾಯಂಡಹಳ್ಳಿಯ ಗಿರೀಶ್ (31), ಬನ್ನೇರಘಟ್ಟದ ಸಂತೋಷ್ ಛಾಬ್ರಿಯಾ (34), ಚಾಮರಾಜನಗರದ ಬ್ರಮರಾಂಭ ಬಡಾವಣೆಯ ಸಿ.ಎನ್.ಲೋಕೇಶ್ (35) ಹಾಗೂ ಮೈಸೂರು ಅರವಿಂದ ನಗರದ ಆರ್.ಭರತರಾಜ್ (30) ಬಂಧಿತ ಆರೋಪಿಗಳು.ಬೆಂಗಳೂರು, ಹಾಸನ, ಮಂಡ್ಯ, ಮದ್ದೂರು ವ್ಯಾಪಾರಿಗಳಿಗೆ ನಕಲಿ ಚೆಕ್ ನೀಡಿ ಖರೀದಿಸಿದ್ದ ಸುಮಾರು 33 ಲಕ್ಷ ರೂ. ಮೌಲ್ಯದ 70 ಟನ್ ಕಬ್ಬಿಣ, ಕೃತ್ಯಕ್ಕೆ ಬಳಸಲಾಗಿದ್ದ 2 ಕಾರು, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್, ನಕಲಿ ಚೆಕ್‍ಗಳನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ.ಆರೋಪಿಗಳು ನಕಲಿ ಚೆಕ್ ನೀಡಿ ಬೆಂಗಳೂರಿನ ಹೆಣ್ಣೂರು ರಸ್ತೆಯ ಹೈಪರ್ ಬ್ರಿಗೇಡ್‍ನಲ್ಲಿ ಖರೀದಿಸಲಾಗಿದ್ದ 16 ಲಕ್ಷ ಮೌಲ್ಯ ದ ಅಕ್ಕಿ, ಬೇಳೆ, ಎಣ್ಣೆ, ದಾಸ್ತಾನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳು ಹಾಸನ ಜಿಲ್ಲೆಯ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಾರಿಯೊಬ್ಬರಿಗೆ ಪತಂಜಲಿ ಆರ್ಯುವೇದ ಸಂಸ್ಥೆ ಹೆಸರಿನಲ್ಲಿ ನಕಲಿ ಚೆಕ್ ನೀಡಿ 25 ಟನ್ ಕಬ್ಬಿಣ ಹಾಗೂ 400 ಮೂಟೆ ಸಿಮೆಂಟ್ ಖರೀದಿ ಮಾಡಿ ವಂಚನೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಐವರು ಆರೋಪಿಗಳು ಮದ್ದೂರಿನ ನಂದೀಶ್ ಸ್ಟೀಲ್‍ನ ಮಾಲೀಕ ಮಂಜುನಾಥ್ ಎಂಬುವರಿಂದ 33 ಲಕ್ಷ ರೂ. ಮೌಲ್ಯ ದ 70 ಕಬ್ಬಿಣ ಖರೀದಿಸಿ ಅದಕ್ಕೆ 25 ಲಕ್ಷ ರೂ. ಮೌಲ್ಯ ದ ನಕಲಿ ಚೆಕ್ ನೀಡಿದ್ದರು. ಈ ಬಗ್ಗೆ ಮಾಲೀಕ ಮಂಜುನಾಥ್ ಮದ್ದೂರು ಪೊಲೀಸರಿಗೆ ದೂರು ನೀಡಿದರು.ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್‍ರೆಡ್ಡಿ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡಿದ್ದ ಜಿಲ್ಲಾ ಅಪರಾಧ ತನಿಖಾ ದಳದ ಸಿಪಿಐ ರಾಜೇಂದ್ರ, ಮದ್ದೂರು ಪಿಎಸ್‍ಐ ಕುಮಾರ್, ಅಪರಾಧ ವಿಭಾಗದ ಪಿಎಸ್‍ಐ ರವಿ ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಬೆಂಗಳೂರು ಮತ್ತು ಕೆಂಗೇರಿ ಬಳಿ ಬಂಧಿಸುವ ಮೂಲಕ ಇಡೀ ವಂಚನೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin