ಪತಿಯ ಗಳಿಕೆ ಮೇಲೆ ಪರಾವಲಂಬಿಯಾಗಬೇಡಿ ಎಂದು ಮಹಿಳೆಗೆ ಕೋರ್ಟ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ನವದೆಹಲಿ, ಮಾ.26-ಗೃಹ ಹಿಂಸೆ ಪ್ರಕರಣದಲ್ಲಿ ತೀರ್ಪು ನೀಡಲಾದ ಮಾಸಿಕ ಮಧ್ಯಂತರ ನಿರ್ವಹಣೆ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ದೆಹಲಿಯ ನ್ಯಾಯಾಲಯವೊಂದು ತಿರಸ್ಕರಿಸಿದೆ. ಅಲ್ಲದೆ, ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಾರದು ಮತ್ತು ಪತಿಯ ಗಳಿಕೆ ಮೇಲೆ ಪರಾವಲಂಬಿಯಾಗಬಾರದು ಎಂದೂ ಕೋರ್ಟ್ ಹೇಳಿದೆ.  ತನಗೆ ನೀಡಿರುವ ಮಾಸಿಕ ಮಧ್ಯಂತರ ಪರಿಹಾರ ಮೊತ್ತವನ್ನು 5,500 ರೂ.ಗಳಿಗೆ 25,000 ರೂ.ಗಳಿಗೆ ಹೆಚ್ಚಿಸಬೇಕೆಂದು ಕೋರಿದ್ದ ಮಹಿಳೆಯೊಬ್ಬರ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಕೆ.ತ್ರಿಪಾಠಿ ತಳ್ಳಿ ಹಾಕಿದರು. ಪರಿತ್ಯಕ್ತ ಗಂಡನಿಗಿಂತ ಹೆಚ್ಚು ವಿದ್ಯಾವಂತೆಯಾದ ನೀವು ಆತನ ಗಳಿಕೆ ಮೇಲೆ ಪರಾವಲಂಬಿಯಾಗಬಾರದು ಎಂದು ಸಲಹೆ ಮಾಡಿದರು.

ಮನವಿದಾರಳು ಅತ್ಯಂತ ಸುಶಿಕ್ಷತ ಮಹಿಳೆಯಾಗಿದ್ದಾರೆ. ಎಂಎ, ಬಿಎಡ್ ಮತ್ತು ಎಲ್‍ಎಲ್‍ಬಿಯಂಥ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿವಾದಿಗಿಂತ (ಪತಿ) ಹೆಚ್ಚು ವಿದ್ಯಾರ್ಹತೆ ಹೊಂದಿದ್ದಾರೆ. ಈಕೆ ತನ್ನ ಜೀವನಕ್ಕಾಗಿ ಸಂಪಾದನೆ ಮಾಡಲು ಅರ್ಹರಾಗಿದ್ದಾರೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಾರದು ಮತ್ತು ಪ್ರತಿವಾದಿಯ ಗಳಿಕೆ ಮೇಲೆ ಪರಾವಂಬಿಯಂತೆ ಅವಲಂಬಿತವಾಗಬಾರದು ಎಂದು ನ್ಯಾಯಮೂರ್ತಿ ಸಲಹೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ದಂಡಾಧಿಕಾರಿಯವರ ನ್ಯಾಯಾಲಯವೊಂದು 2008ರಲ್ಲಿ ಮಹಿಳೆಗೆ 5,000 ರೂ.ಗಳ ಮಾಸಿಕ ಪರಿಹಾರ ನೀಡುತ್ತು. 2015ರಲ್ಲಿ ಈ ಮೊತ್ತವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಇದರಿಂದ ಅಸಮಾಧಾನಗೊಂಡ ಮಹಿಳೆ ತನಗೆ ಮಾಸಿಕ ನಿರ್ವಹಣಾ ಮೊತ್ತವನ್ನು 25,000 ರೂ.ಗಳಿಗೆ ಹೆಚ್ಚಿಸಬೇಕೆಂದು ಮೇಲ್ಮನವಿ ಸಲ್ಲಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin