ಪತಿ ವಿಧಿವಶವಾದ ಮರುದಿನವೇ ಪತ್ನಿಯೂ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Couple--01

ಚಿತ್ರದುರ್ಗ, ಮಾ.24– ಗಂಡ-ಹೆಂಡತಿ ಸಂಬಂಧ ಜನ್ಮ ಜನ್ಮದ ಅನುಬಂಧ ಅಂತಾರೆ. ಅದು ನಿಜಾನೋ… ಸುಳ್ಳೋ ಗೊತ್ತಿಲ್ಲ…. ಆದರೆ, ಪತಿ ವಿಧಿವಶವಾದ ಮರುದಿನವೇ ಪತ್ನಿಯೂ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ನಡೆದಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ನಾಗರಾಜಪ್ಪ (60) ನಿನ್ನೆ ಸಾವನ್ನಪ್ಪಿದ್ದು, ಈ ಕೊರಗಿನಲ್ಲೇ ಇಂದು ಬೆಳಗ್ಗೆ ಪತ್ನಿ ಸುವರ್ಣಮ್ಮ (40) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸುವರ್ಣಮ್ಮ ಟೈಲರ್ ವೃತ್ತಿ ಮಾಡಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ತಂದೆ-ತಾಯಿ ಸಾವಿನಿಂದ ಮಕ್ಕಳು ಕಂಗಾಲಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin