ಪತ್ನಿಗೆ ಪಬ್ಲಿಕ್ ಎದುರೇ ಕಿಸ್ ಮಾಡಿದ ಪರ್ಫೆಕ್ಷನಿಸ್ಟ್ ಅಮಿರ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

Amir-khan
ಬಾಲಿವುಡ್‍ನ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಅಭಿಮಾನಿಗಳನ್ನು ಚಕಿತಗೊಳಿಸಿದ ಸುದ್ದಿಯೊಂದು ಬಿ-ಟೌನ್‍ನಿಂದ ಬಂದಿದೆ. ಅಮಿರ್ ಬಹಳ ಶಿಸ್ತಿನ ನಟ. ತನ್ನ ನಡೆ-ನುಡಿ, ಮಾತು-ಕ್ರಿಯೆಯಲ್ಲಿ ತುಂಬಾ ಎಚ್ಚರವಹಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಸಭೈ-ಸಮಾರಂಭಗಳು ಮತ್ತು ಸುದ್ದಿಗೋಷ್ಠಿಯಲ್ಲಿ ಜಾಗ್ರತರಾಗಿರುತ್ತಾರೆ. ಇಂಥ ಖಾನ್ ಜಿಯೋ ಮಾಮಿ 18ನೇ ಮುಂಬೈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ವೇಳೆ ತನ್ನ ಮೆಚ್ಚಿದ ಮಡದಿಯನ್ನು ಆಲಂಗಿಸಿಕೊಂಡು ಚುಂಬಿಸಿ ಅಚ್ಚರಿ ಮೂಡಿಸಿದ್ದಾರೆ. ಪತ್ನಿ ಕಿರಣ್ ರಾವ್ ತುಟಿಗೆ ಅಮಿರ್ ಚುಂಬಿಸುವ ದೃಶ್ಯವನ್ನು ಮಾಧ್ಯಮದ ಕ್ಯಾಮೆರಾಗಳು ಸೆರೆಹಿಡಿದವು.

ಈತನ ಪಿಡಿಎ (ಪಬ್ಲಿಕ್ ಡಿಸ್‍ಪ್ಲೇ ಆಫ್ ಅಫೆಕ್ಷನ್-ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ವ್ಯಕ್ತಪಡಿಸುವಿಕೆ) ಪರಿ ಕಂಡು ಅಭಿಮಾನಿ ಗಳಲ್ಲದೇ ಮಾಧ್ಯಮಗಳು ಬೆರಗಾದವು. ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಎಚ್ಚರ ವಹಿಸುವ ಅಮಿರ್‍ಗೆ ಚಲನಚಿತ್ರೋತ್ಸವ ಸಮಾರಂಭದಲ್ಲಿ ತನ್ನ ಪತ್ನಿ ಬಗ್ಗೆ ಹಠಾತ್ ಪ್ರೀತಿ ಉಕ್ಕಿದ್ದೇಕೆ ಎಂಬ ಬಗ್ಗೆ ಅಭಿಮಾನಿಗಳು ಚರ್ಚಿಸಿದ್ದಾರೆ. ತಮ್ಮ ಬಹು ನಿರೀಕ್ಷಿತ ದಂಗಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಆ ಖುಷಿಯಲ್ಲೂ ಅಮೀರ್ ತೇಲುತ್ತಿದ್ದಾರೆ.ಖಾನ್‍ತ್ರಯರಲ್ಲಿ ಒಬ್ಬನಾದ ಅಮಿರ್ 2002ರಲ್ಲಿ ಮೊದಲ ಪತ್ನಿ ರೀನಾ ದತ್‍ನಿಂದ ಡೈವೋರ್ಸ್ ಪಡೆದು 2005ರಲ್ಲಿ ಕಿರಣ್ ರಾವ್‍ರನ್ನು ಮದುವೆಯಾದರು. ಲಗಾನ್ ಸಿನಿಮಾದಲ್ಲಿ ಖಾನ್‍ನನ್ನು ಭೈೀಟಿಯಾಗಿದ್ದ ಕಿರಣ್ ಕೆಲವು ಚಿತ್ರಗಳಲ್ಲಿ ಸಹಾಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ನಂತರ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ವಿವಾಹಬಂಧನಕ್ಕೆ ಒಳಗಾದರು.

 

► Follow us on –  Facebook / Twitter  / Google+

Facebook Comments

Sri Raghav

Admin