ಪತ್ನಿಯ ಕೊಳೆತ ಶವದೊಂದಿಗೆ ವಾಸ ಮಾಡುತ್ತಿದ್ದ 90ರ ವೃದ್ಧ..!

ಈ ಸುದ್ದಿಯನ್ನು ಶೇರ್ ಮಾಡಿ

Women01

ನವದೆಹಲಿ, ಅ.12-ತನ್ನ ಪತ್ನಿಯ ಕೊಳೆತ ಶವದೊಂದಿಗೆ 90 ವರ್ಷದ ವೃದ್ಧನೊಬ್ಬ ಹಲವು ದಿನಗಳಿಂದ ವಾಸಿಸುತ್ತಿರುವ ವಿಲಕ್ಷಣ ಪ್ರಸಂಗ ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಕಳೆದ ರಾತ್ರಿ ಬೆಳಕಿಗೆ ಬಂದಿದೆ. ಗೋವಿಂದರಾಮ್ ಎಂಬ ವಯೋವೃದ್ಧನ ಮನೆಯಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ವಿಚಿತ್ರ ಸಂಗತಿ ಬಯಲಾಯಿತು. ಪೊಲೀಸರು ಕಲ್ಕಾಜಿಯ ಏಕ ಕೊಠಡಿಯ ಫ್ಲಾಟ್‍ನ ಒಳಗೆ ಅಲ್ಲಿನ ದೃಶ್ಯ ಕಂಡು ಅವಾಕ್ಕಾದರು. ಗೋವಿಂದರಾಮ್ ಮಂಚದ ಮೇಲೆ ಮಲಗಿದ್ದರೆ, ಆತನ ಪತ್ನಿ ಗೋಪಿಕಾ ಶವ ನೆಲದಲ್ಲಿತ್ತು.

ಗೋಪಿಕಾ ಕೆಲವು ದಿನಗಳ ಹಿಂದೆಯೇ ಅಸುನೀಗಿದ್ದು, ಮಾನಸಿಕ ಅಸ್ವಸ್ಥರಾಗಿದ್ದ ಗೋವಿಂದ ರಾಮ್ ಒಂದೇ ಕೊಠಡಿಯಲ್ಲಿ ಶವದೊಂದಿಗೆ ಇದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin