ಪತ್ನಿಯ ಹಲ್ಲೆಗೆ ಯತ್ನಿಸಿದ ಪತಿ ವಿರುದ್ಧ ಪ್ರಕರಣ ದಾಖಲು
ಈ ಸುದ್ದಿಯನ್ನು ಶೇರ್ ಮಾಡಿ
ಕೆಜಿಎಫ್, ಆ.31- ಗಂಡನ ಮೇಲೆ ದೂರು ನೀಡಿದ್ದ ಪತ್ನಿಯನ್ನು ಸಾರ್ವಜನಿಕವಾಗಿ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ಗಂಡನ ವಿರುದ್ಧ ಬೆಮಲ್ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಬೆಮಲ್ನಗರದ ವಾಣಿ ನಗರದ ಭರಣಿಕುಮಾರಿ, ತನ್ನ ಗಂಡನ ಮೇಲೆ ಕೆಜಿಎಫ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗಾಗಿ ಹಾಜರಾಗಿ, ತಂದೆಯೊಂದಿಗೆ ಹಿಂತಿರುಗುತ್ತಿದ್ದಾಗ, ಬೆಮಲ್ ನಗರದ ಆಲದ ಮರದ ಬಳಿ ಆಕೆಯ ಗಂಡ ಮಂಜುನಾಥ್ ಅಡ್ಡಗಟ್ಟಿ ಆಕೆಯ ಬಟ್ಟೆಯನ್ನು ಹರಿದು ಹಲ್ಲೆ ನಡೆಸಲು ಯತ್ನಿಸಿದ ಎಂದು ಆರೋಪಿಸಲಾಗಿದೆ.ನಂತರ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಎಂದು ದೂರಲಾಗಿದ್ದು, ಬೆಮಲ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
► Follow us on – Facebook / Twitter / Google+
Facebook Comments