ಪತ್ನಿ ಮೇಲಿನ ಕೋಪಕ್ಕೆ ತನ್ನಿಬ್ಬರ ಮಕ್ಕಳನ್ನು ಕೊಂದಿದ್ದ ಕ್ರೂರ ತಂದೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

murder-6

ಬೆಂಗಳೂರು, ನ.17-ಪತ್ನಿ ಮೇಲಿನ ಕೋಪಕ್ಕೆ ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಸತೀಶ್ ಅಲಿಯಾಸ್ ಸತೀಶ್‍ಕುಮಾರ್ ಪೊಲೀಸರ ವಶದಲ್ಲಿರುವ ಆರೋಪಿ. ಇಂದು ಮುಂಜಾನೆ ನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.ಕೋಣನಕುಂಟೆ ಕ್ರಾಸ್ ಸಮೀಪದ ಬೀರೇಶ್ವರ ನಗರ ನಿವಾಸಿ ಜ್ಯೋತಿ ಎಂಬುವರು ಮಂಗಳವಾರ ಸ್ಟೌವ್ ಮೇಲೆ ಕೋಳಿಸಾರನ್ನಿಟ್ಟು ಪತಿ ಸತೀಶ್‍ಗೆ ನೋಡಿಕೊಳ್ಳಲು ಹೇಳಿ ತನ್ನಿಬ್ಬರು ಮಕ್ಕಳಾದ ಆದಿತ್ಯ (4) ಮತ್ತು ಶಿವಕುಮಾರ್ (6)ನನ್ನು ಕರೆದುಕೊಂಡು ಅಂಗನವಾಡಿಗೆ ಬಿಟ್ಟು ಮನೆಗೆಲಸಕ್ಕೆ ಹೋಗಿದ್ದರು.
ಈ ವೇಳೆ ಸ್ಟೌವ್ ಮೇಲಿದ್ದ ಸಾರು ಸೀದಿದೆ. ರಾತ್ರಿ ಮನೆಗೆ ಬಂದ ಜ್ಯೋತಿ ಈ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ್ದಾಳೆ. ಇದರಿಂದ ಕೋಪಗೊಂಡ ಸತೀಶ್ ಪತ್ನಿ ಮೇಲೆ ಹಲ್ಲೆ ಮಾಡಿದ್ದ. ನಿನ್ನೆ ಬೆಳಗ್ಗೆ ತನ್ನಿಬ್ಬರು ಮಕ್ಕಳನ್ನು ಅಂಗನವಾಡಿಗೆ ಬಿಟ್ಟು ಜ್ಯೋತಿ ಮನೆಗೆಲಸಕ್ಕೆ ಹೋಗಿದ್ದರು. ಮದ್ಯ ವ್ಯಸನಿಯಾಗಿದ್ದ ಸತೀಶ್, ಪತ್ನಿ ಮೇಲಿನ ಕೋಪಕ್ಕೆ ಅಂಗನವಾಡಿಯಲ್ಲಿದ್ದ ತನ್ನಿಬ್ಬರು ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದು ಕೊಲೆ ಮಾಡಿ ಪರಾರಿಯಾಗಿದ್ದನು.ಮಧ್ಯಾಹ್ನ ಜ್ಯೋತಿ ಮನೆಗೆ ವಾಪಸ್ಸಾದಾಗಲೇ ಮಕ್ಕಳು ಭೀಕರವಾಗಿ ಕೊಲೆಯಾಗಿರುವುದು ಕಂಡು ಬಂದಿತು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ಆರೋಪಿ ಸತೀಶ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin