ಪತ್ನಿ ಮೇಲೆ ಜಿರಲೆ ಹಾಕಿ ‘ಖುಷಿ’ಪಡುತ್ತಿದ್ದ ವಿಕೃತ ಟೆಕ್ಕಿ..!

ಈ ಸುದ್ದಿಯನ್ನು ಶೇರ್ ಮಾಡಿ

cockroach

ಬೆಂಗಳೂರು, ಜ.18-ವಿಕೃತ ಮನಸ್ಸಿನ ಟೆಕ್ಕಿಯೊಬ್ಬ ಪತ್ನಿ ಮೇಲೆ ಜಿರಲೆ ಹಾಕಿ ಆಕೆ ಕಿರುಚಾಡುವುದನ್ನು ಕಂಡು ಸಂತೋಷಪಡುತ್ತಿದ್ದ ಈತನ ವಿರುದ್ಧ ವನಿತಾ ಸಹಾಯವಾಣಿಯಲ್ಲಿ ದೂರು ದಾಖಲಾಗಿದೆ. ಬನ್ನೇರುಘಟ್ಟದ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಅವಿನಾಶ್ ಪ್ರೀತಿಸಿ ಸುಜಾತ ಎಂಬುವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚೆಗೆ ಟೆಕ್ಕಿ ಅನೈತಿಕ ಸಂಬಂಧ ಹೊಂದಿದ್ದನಂತೆ, ಇದರಿಂದ ನೊಂದಿದ್ದ ಸುಜಾತ ಪತಿಯಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.

ಇತ್ತ ಟೆಕ್ಕಿ ಅವಿನಾಶ್ ಪತ್ನಿಯನ್ನು ಹೆದರಿಸಿ ತನ್ನತ್ತ ಸೆಳೆದುಕೊಳ್ಳಲು ಆತ ಆಯ್ದುಕೊಂಡಿದ್ದು ಜಿರಲೆಯನ್ನು. ಸುಜಾತಾಳಿಗೆ ಜಿರಲೆ ಎಂದರೆ ಭಯವಂತೆ. ಇದನ್ನು ಅರಿತಿದ್ದ ಅವಿನಾಶ್ ಜಿರಲೆಯನ್ನು ತಂದು ಆಕೆ ಬಟ್ಟೆಯೊಳಗೆ ಹಾಕಿ ಹಿಂಸೆ ನೀಡುತ್ತಿದ್ದನು. ಈ ವೇಳೆ ಪತ್ನಿ ಕಿರುಚಾಡುವುದನ್ನು, ಕುಣಿದಾಡುವುದನ್ನು ಕಂಡು ಸಂತೋಷ ಪಡುತ್ತಿದ್ದ. ಈತನ ಕಾಟದಿಂದ ಬೇಸತ್ತ ಸುಜಾತ ವಿಕೃತ ಮನಸ್ಸಿನ ಟೆಕ್ಕಿ ವಿರುದ್ಧ ವನಿತಾ ಸಹಾಯವಾಣಿಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin