ಪತ್ನಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

wife--and--husband

ಬೇಲೂರು, ಅ.1-ಕ್ಷುಲಕ ಕಾರಣಕ್ಕೆ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ಪತಿಯು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಘಟನೆಯಲ್ಲಿ ಪತಿ-ಪತ್ನಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಡೆದದ್ದೇನು: ಪಟ್ಟಣದ ಪಂಪ್ ಹೌಸ್ ರಸ್ತೆಯ ನಿವಾಸಿ ಪ್ರಭಾಕರ್ ತಡರಾತ್ರಿ ಮನೆಯಲ್ಲಿ ಕ್ಷುಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾರೆ.

ಆವೇಶದಲ್ಲಿ ಪತ್ನಿ ಅನನ್ಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮುಖ, ಕೈ, ದೇಹದ ಹಲವು ಭಾಗಗಳಿಗೆ ಹಲ್ಲೆ ನಡೆಸಿದ್ದಾನೆ. ನಂತರ ತಾನು ಮಾಡಿದ ಅಪರಾಧದಿಂದ ಎಚ್ಚೆತ್ತುಕೊಂಡ ಪ್ರಭಾಕರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಪ್ರಭಾಕರ್ ಮನೆಯವರ ಕೂಗಾಟದಿಂದ ಅಕ್ಕಪಕ್ಕದವರು ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿ ತೀವ್ರವಾಗಿ ಗಾಯಗೊಂಡಿದ್ದ ಅನನ್ಯ ಮತ್ತು ಪ್ರಭಾಕರ್ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಿದರು.ಅಕ್ಕಪಕ್ಕದವರ ಮುಂಜಾಗ್ರತೆಯಿಂದ ಪತಿ-ಪತ್ನಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪತಿ-ಪತ್ನಿ ಜಗಳದಲ್ಲಿ ಪುತ್ರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆಗೂ ಚಿಕಿತ್ಸೆ ಕೊಡಿಸಲಾಗಿದೆ. ಬೇಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಕಾರಣ ಏನೆಂಬುಂದು ತಿಳಿದು ಬಂದಿಲ್ಲ.

 

 

► Follow us on –  Facebook / Twitter  / Google+

 

Facebook Comments

Sri Raghav

Admin