ಪತ್ನಿ ಸಾವಿಗೆ ಕಾರಣವಾದ ಪತಿಗೆ 6 ವರ್ಷ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

JAIL--TUMAKURU

ಮಂಡ್ಯ,ಮೇ26- ಪತ್ನಿ ಸಾವಿಗೆ ಕಾರಣವಾದ ಪತಿಗೆ ಶ್ರೀರಂಗಪಟ್ಟಣ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಹೋಬಳಿ ಬಸವನಗುಡಿ ಕೊಪ್ಪಲು ಗ್ರಾಮದ ಜವರೇಗೌಡ ಅವರ ಮಗ ಯೋಗೇಶ್‍ಗೆ ನ್ಯಾಯಾಲಯ 6 ವರ್ಷ ಜೈಲು ಹಾಗೂ 45 ಸಾವಿರ ದಂಡ ವಿಧಿಸಿದೆ. ಯೋಗೇಶ್ ಶೀಲ ಶಂಕಿಸಿ ತನ್ನ ಪತ್ನಿ ಸವಿತಾಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ . ಈ ಹಿಂಸೆ ತಾಳಲಾರದೆ 2012ರ ಫೆ.2ರಂದು ಸವಿತ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ತೀವ್ರವಾಗಿ ಗಾಯಗೊಂಡ ಸವಿತಾ ಚಿಕಿತ್ಸೆ ಫಲಕಾರಿಯಾಗದೆ ಫೆ.23ರಂದು ಸಾವನ್ನಪ್ಪಿದಳು.

ಈ ಸಂಬಂಧ ಬಂಧಿತನಾಗಿದ್ದ ಪತಿ ಯೋಗೇಶ್ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕನಸಪ್ಪ ನಾಯಕ್ ತೀರ್ಪು ಪ್ರಕಟಿಸಿದ್ದು ಸರ್ಕಾರಿ ವಕೀಲರಾಗಿ ಫೀರೋಜ್ ಖಾನ್ ವಾದ ಮಂಡಿಸಿದ್ದರು.

Facebook Comments

Sri Raghav

Admin