ಪತ್ರಕರ್ತರಿಗೆ ನೀಡಲಾದ ಜೈಲು ಶಿಕ್ಷೆ, ದಂಡವನ್ನು ವಾಪಸ್ ಪಡೆಯಿರಿ : ಹೊರಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Basavaraj-Horatti

ಬೆಂಗಳೂರು, ಜೂ.27- ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್‍ರಾಜು ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.  ಈ ಸಂಬಂಧ ವಿಧಾನಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊರಟ್ಟಿ ಪತ್ರ ಬರೆದಿದ್ದು, ವಿಧಾನಸಭೆಯ ಸಮಿತಿಗೆ, ಸದನಕ್ಕೆ ಹಾಗೂ ಹಕ್ಕು ಚ್ಯುತಿ ಬಾಧ್ಯತಾ ಸಮಿತಿಗೆ ಅಗೌರವ ತೋರಿಸುವುದು ಕೂಡ ಸರಿಯಾದ ಕ್ರಮವಲ್ಲ. ಆದರೆ ಮುಂದೆ ಅಗೌರವ ತೋರದಂತೆ ಸೂಕ್ಷ್ಮವಾಗಿ ಪತ್ರಕರ್ತರಿಗೆ ತಿಳಿ ಹೇಳಬೇಕು.

ಶಾಸಕಾಂಗ ಮತ್ತು ಮಾಧ್ಯಮದ ನಡುವೆ ಮಧುರವಾದ ಸಂಬಂಧ ಬೆಳೆಸಲು ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಪ್ರೇರಣೆಯಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.  ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖ ಮುಖಂಡರೊಡನೆ ಚರ್ಚೆ ಮಾಡಿ ಸಾಧಕಬಾಧಕಗಳ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವುದು ವಾಡಿಕೆ. ಆದರೆ ಕಠಿಣ ಶಿಕ್ಷೆ ವಿಧಿಸಿರುವುದು ಒಳ್ಳೆಯದಲ್ಲ. ಇದರಿಂದ ಮಾಧ್ಯಮಗಳನ್ನು ನಿಯಂತ್ರಿಸುವುದು, ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ನನಗೆ ವೈಯಕ್ತಿಕವಾಗಿ ಸರಿಯಾದ ಕ್ರಮವಲ್ಲ ಎನಿಸುತ್ತದೆ. ಈಗಾಗಲೇ ಶಿಕ್ಷೆ ನೀಡಿರುವುದನ್ನು ಎಲ್ಲಾ ಮಾಧ್ಯಮದ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ ಎಂದು ಪತ್ರದಲ್ಲಿ ಹೊರಟ್ಟಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin