ಪತ್ರಕರ್ತರು, ಲೇಖಕರು, ವಿಚಾರವಾದಿಗಳ ಹತ್ಯೆಯನ್ನು ಕಾಂಗ್ರೆಸ್ ಸಹಿಸಲ್ಲ : ಲಕ್ಷ್ಮೀ

ಈ ಸುದ್ದಿಯನ್ನು ಶೇರ್ ಮಾಡಿ

Lakshmi

ಬೆಂಗಳೂರು, ಸೆ.7- ಸಮಾಜ ಮುನ್ನಡೆಸುವ ಪತ್ರಕರ್ತರು, ಲೇಖಕರು, ವಿಚಾರವಾದಿಗಳು ಹಾಗೂ ವಿಮರ್ಶಕರ ಮೇಲೆ ಹಲ್ಲೆ, ಹತ್ಯೆ ನಡೆದರೆ ಅದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸದಸ್ಯೆ ಲಕ್ಷ್ಮೀಹೆಬ್ಬಾಳ್ಕರ್ ಹೇಳಿದ್ದಾರೆ. ಪ್ರಗತಿಪರ ಚಿಂತಕಿ, ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗೌರಿ ಆತ್ಮಕ್ಕೆ ಶಾಂತಿ ಕೋರಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀಹೆಬ್ಬಾಳ್ಕರ್, ಅಸಹಿಷ್ಣುತೆಯ ಅತಿರೇಖದ ಪರಮಾವಧಿಯ ಕೃತ್ಯ ಇದಾಗಿದೆ. ಅಮಾನವೀಯ ದಬ್ಬಾಳಿಕೆ ಧೋರಣೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಹಂತಕರು ಮತ್ತು ಅವರ ಹಿನ್ನಲೆಯ ಶಕ್ತಿಗಳನ್ನು ಭೇದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫೈಜಾನ್ ಸೇಠ್, ಡಾ.ಮಾರ್ಟಿನ್ ಶಿವಾಪುರ್, ಮೃಣಾಲಹೆಬ್ಬಾಳ್ಕರ್ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Facebook Comments

Sri Raghav

Admin