ಪಥಸಂಚಲನ ವೀಕ್ಷಿಸುತ್ತಿದ್ದವರ ಮೇಲೆ ಟ್ರಕ್ ಹರಿಸಿದ ಪಾನಮತ್ತ ಚಾಲಕ, 30 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Truck--002

ನ್ಯೂ ಒರ್ಲಿನ್ಸ್, ಫೆ.27-ಪಾನಮತ್ತ ಟ್ರಕ್ ಚಾಲಕನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದಾಗಿ 30ಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ನಿನ್ನೆ ಅಮೆರಿಕದ ನ್ಯೂ ಒರ್ಲಿನ್‍ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಅನೇಕ ವಾಹನಗಳು ಜಖಂಗೊಂಡಿದೆ. ನ್ಯೂ ಒರ್ಲಿನ್ಸ್‍ನಲ್ಲಿ ನ್ಯೂ ಮರ್ಡಿಗ್ರಾಸ್ ಪಥಸಂಚಲನ ನಡೆಯುತ್ತಿತ್ತು. ಈ ಆಕರ್ಷಕ ಪರೇಡ್ ವೀಕ್ಷಿಸಲು ನೂರಾರು ಜನರು ರಸ್ತೆ ಬದಿ ನಿಂತಿದ್ದರು. ಇದೇ ಸಂದರ್ಭದಲ್ಲಿ ಪಾನಮತ್ತ ಪಿಕ್‍ಅಪ್ ಟ್ರಕ್ ಚಾಲಕ ಮನಬಂದಂತೆ ವಾಹನ ಚಾಲನೆ ಮಾಡಿಕೊಂಡು ರಸ್ತೆ ಬಿಟ್ಟು ಪುಟ್‍ಪಾತ್ ಮೇಲೆ ಟ್ರಕ್ ನುಗ್ಗಿಸಿದ. ಈ ಘಟನೆಯಲ್ಲಿ ಪಥಸಂಚಲನ ವೀಕ್ಷಿಸುತ್ತಿದ್ದ 30ಕ್ಕೂ ಹೆಚ್ಚ ಮಂದಿ ಗಾಯಗೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಚಾಲಕನ ನಿರ್ಲಕ್ಷ್ಯಕ್ಕೆ ಐದಾರು ವಾಹನಗಳಿಗೂ ಹಾನಿಯಾಗಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಆಲ್ಕೋಹಾಲ್ ಅಥವಾ ಮಾದಕ ವಸ್ತು ಸೇವನೆ ಪ್ರಭಾವದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin