ಪದವಿ ತರಗತಿಗಳ ಲೋಪದೋಷಗಳ ಸರಿಪಡಿಸಿ ಫಲಿತಾಂಶ ಪ್ರಕಟಿಸಬೇಕು : ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

3
ಹೂವಿನಹಡಗಲಿ,ಮಾ.17- ಪದವಿ ತರಗತಿಗಳ ಫಲಿತಾಂಶದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಒತ್ತಾಯಿಸಿ ತಾಲೂಕು ಎಸ್‍ಎಫ್‍ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಎಸ್‍ಆರ್‍ಎಂಪಿಪಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ, ಪ್ರಾಚಾರ್ಯ ಮಲ್ಲಿಕಾರ್ಜುನ ಅವರ ಮುಖಾಂತರ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಬಿಎ, ಬಿಕಾಂ, ಬಿಎಸ್‍ಸಿ, ಪ್ರಥಮ ಸೆಮಿಸ್ಟರ್‍ನ ಫಲಿತಾಂಶದಲ್ಲಾದ ಲೋಪದೋಷಗಳನ್ನು ಸರಿಪಡಿಸಿ, ತಡೆಹಿಡಿದಿರುವ ಫಲಿತಾಂಶವನ್ನು ಪ್ರಕಟಿಸಲು ಹಾಗೂ ಉಚಿತ ಮರು ಮೌಲ್ಯ  ಮಾಪನ ಮಾಡಬೇಕು. ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆ ಬರೆದಿದ್ದರು ಸಹ ಆನ್‍ಲೈನ್ ಫಲಿತಾಂಶದಲ್ಲಿ ಗೈರು ಹಾಜರಿ ಎಂದು ನಮೂದಿಸಲಾಗಿದೆ. ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಸಹ ಆನ್‍ಲೈನ್ ಫಲಿತಾಂಶದಲ್ಲಿ ಅನುತೀರ್ಣ ಎಂದು ನಮೂದಿಸಲಾಗಿದೆ. ಈ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಇದನ್ನು ಎಸ್‍ಎಫ್‍ಐ ಖಂಡಿಸುತ್ತದೆ ಎಂದರು.

ಅನೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ಆನ್‍ಲೈನ್‍ನಲ್ಲಿ ತಡೆಹಿಡಿಯಲಾಗಿದ್ದು, ಇದಕ್ಕೆ ಸ್ಪಷ್ಟವಾದ ಕಾರಣವೂ ಸಹ ಇರದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ, ಕಾರಣ ಮುಂದಿನ 6 ದಿನಗಳ ಒಳಗಾಗಿ ಪರಿಶೀಲಿಸದೆ ಇದ್ದಲ್ಲಿ ವಿಶ್ವ ವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಉಪಾಧ್ಯಕ್ಷ ಓಂಕಾರನಾಯ್ಕ, ತಾಲೂಕು ಅಧ್ಯಕ್ಷ ಮೇಘರಾಜ, ಕಾರ್ಯದರ್ಶಿ ವಿಕಾಸನಾಯ್ಕ, ಕೃಷ್ಣಾನಾಯ್ಕ, ಪೃಥ್ವಿರಾಜ್ ಸೇರಿದಂತೆ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin