ಪದಾಧಿಕಾರಿಗಳ ಚುನಾವಣೆಗೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

devanahalli--4

ದೇವನಹಳ್ಳಿ,ಆ.15- ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯು ಶಿಘ್ರದಲ್ಲಿಯೇ ಬರಲಿದ್ದು, ಅದಕ್ಕಾಗಿ ಸಕಲ ಸಿದ್ದತೆಯನ್ನು ಮಾಡಲಾಗುತ್ತಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್ ತಿಳಿಸಿದರು.  ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಹುಟ್ಟುಹಬ್ಬದ ಅಂಗವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಯುವ ಕಾಂಗ್ರೆಸ್ ಬಲಪಡಿಸಲಾಗಿದೆ. ಪ್ರತಿ ಯುವಕರನ್ನು ಒಟ್ಟುಗೂಡಿಸಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸರ್ಕಾರವು ಕಳೆದ ಮೂರು ವರ್ಷದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಬಡವರಿಗೆ ರೈತರಿಗೆ ಹೆಚ್ಚಿನ ಅನುಕೂಲ ಮಾಡಿದೆ ಎಂದರು.

ನಲ್ಲೂರು ಮತ್ತು ಚನ್ನರಾಯಪಟ್ಟಣ ಗ್ರಾಪಂಗಳ ಚುನಾವಣೆ ಘೋಷಣೆಯಾಗಿರುವುದರಿಂದ ಆ ಭಾಗದ ಆಸಕ್ತ ಯುವಕರಿಗೆ ಆಧ್ಯತೆ ನೀಡಿದರೆ ಸಹಕಾರಿಯಾಗುತ್ತದೆ ಹಿರಿಯರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ, ಬೂತ್ ಮಟ್ಟದಿಂದಲೂ ಸಹ ಯುವಕರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.  ಜಿಲ್ಲಾ ಕಾಂಗ್ರೆಸ್ ಎಸ್‍ಸಿ ವಿಭಾಗದ ಅಧ್ಯಕ್ಷ ಎ.ಚಿನ್ನಪ್ಪ, ಜಿಪಂ ಸದಸ್ಯ ಕೆ.ಸಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮುನಿರಾಜ್, ತಾಲೂಕು ಕರವೇ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ಅಶ್ವಥ್ ಗೌಡ, ಸಂಘಟನ ಕಾರ್ಯದರ್ಶಿ ಹುರಳಗುರ್ಕಿ ಶಿವರಾಜ್, ವಿಜಯಪುರ ಹೋಬಳಿ ಯುವ ಕಾಂಗ್ರೆಸ್ ಹುರಳಗುರ್ಕಿ ಮಂಜುನಾಥ್, ಮುಖಂಡ ಬೂದಿಹಾಳ ದೇವರಾಜ್, ನಾರಾಯಣಪುರ ಬಚ್ಚೇಗೌಡ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin