ಪದೇ ಪದೇ ಜಾನುವಾರುಗಳ ಮೇಲೆ ದಾಳಿ ಮಾಡಿ ಕಾಟ ಕೊಡುತ್ತಿದ್ದ ಚಿರತೆ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

chirate

ಹುಳಿಯಾರು, ಫೆ.28-ಪಟ್ಟಣಕ್ಕೆ ಸಮೀಪದ ಬರದಲೇಪಾಳ್ಯದಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ದಾಳಿ ಮಾಡಿ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದ್ದು ಜನರು ನಿರಾಳದ ಉಸಿರು ಬಿಟ್ಟಿದ್ದಾರೆ.ಮೊನ್ನೆಯಷ್ಟೆ ದುರ್ಗದ ಸೀಮೆ ಪಾಳ್ಯದಲ್ಲಿ ದಾಳಿಂಬೆ ತೋಟಕ್ಕೆ ಹೋಗಿದ್ದ ವ್ಯಕ್ತಿಯ ಮೇಲೂ ಚಿರತೆ ದಾಳಿ ಗಾಯಗೊಳಿಸಿತ್ತು. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ದರು.ಚಿರತೆ ದಾಳಿಂಬೆ ಗಿಡಗಳ ಸಂದಿಯಲ್ಲೇ ಅಡಗಿಕುಳಿತ್ತಿದ್ದರ ಬಗ್ಗೆ ಅರಣ್ಯ ಇಲಾಖೆ ಗ್ರಾಮಸ್ಥರು ತಿಳಿಸಿದ್ದರು.  ಅರವಳಿಕೆ ತಜ್ಞ ಡಾ.ಮುರಳಿ ಮತ್ತು ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಪ್ರಾರಂಭಿಸುತ್ತಿದ್ದಂತೆ ಕುತೂಹಲಿ ಜನರು ನೂರಾರು ಸಂಖ್ಯೆಯಲ್ಲಿ ಧಾವಿಸಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು.

27HULIYAR1A
ಅಂತೂ-ಇಂತೂ ಸಂಜೆ ವೇಳೆಗೆ ಅರವಳಿಗೆ ಚುಚ್ಚುಮದ್ದು ಚಿರತೆಗೆ ತಾಗಿ ಅದು ನಿತ್ರಾಣಗೊಂಡಿತು. ಕೊನೆಗೆ ಅದನ್ನು ಸೆರೆಹಿಡಿದಿದ್ದು ಬಂಡೀಪುರ ಅರಣ್ಯಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೀಕಾರ್ಜುನಯ್ಯ, ಉಪವಲಯ ಅರಣ್ಯಾಧಿಕಾರಿ ಬಸವರಾಜು, ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್ ಸೇರಿದಂತೆ ಅರಣ್ಯ ಹಾಗೂ ಹುಳಿಯಾರು ಪೋಲಿಸ್ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin