ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Parappana-Agraha-r-021

ಬೆಂಗಳೂರು, ಜು.18- ಜೈಲು ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ. ವರ್ಗಾವಣೆಯಾದ ಅಧಿಕಾರಿಗಳ ಪರ- ವಿರೋಧ ಕೈದಿಗಳು ಪ್ರತಿಭಟನೆಗಿಳಿದಿದ್ದಾರೆ ಎಂದು ತಿಳಿದುಬಂದಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮ, ಅವ್ಯವಹಾರ ಸಂಬಂಧ ಡಿಐಜಿ ರೂಪಾ ನೀಡಿದ ವರದಿ, ಡಿಜಿಪಿ ಸತ್ಯನಾರಾಯಣರಾವ್ ಅವರ ಮೇಲೆ ಮಾಡಿರುವ ಅವ್ಯವಹಾರದ ಆರೋಪ, ಪರಸ್ಪರ ಹೇಳಿಕೆ, ಪ್ರತಿಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರಗೊಂಡ
ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ಜೈಲು ಅಧೀಕ್ಷಕ ಕೃಷ್ಣಕುಮಾರ್ ಅವರನ್ನು ನಿನ್ನೆ ಸರ್ಕಾರ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಪರ-ವಿರೋಧದ ಎರಡು ಗುಂಪುಗಳಾಗಿ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ.

ಡಿಐಜಿ ರೂಪಾ ಅವರು ವರ್ಗಾವಣೆ ರದ್ದುಪಡಿಸಬೇಕು, ಜೈಲಿನಲ್ಲಿ ನಡೆಯುವ ಅಕ್ರಮಗಳ ತಡೆ, ಅಮಾಯಕರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಬೇಕೆಂದು ಹಲವು ಖೈದಿಗಳು ಬೆಳಗ್ಗೆ ಉಪಹಾರ ಸೇವಿಸದೆ ಉಪವಾಸ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಡಿಜಿಪಿ ಸತ್ಯನಾರಾಯಣರಾವ್ ಅವರ ಪರವಾಗಿಯೂ ಜೈಲಿನಲ್ಲಿ ಪ್ರತಿಭಟನೆ ನಡೆದಿದ್ದು, ಜೈಲು ಇಬ್ಭಾಗವಾದಂತಾಗಿದೆ. ಇದಲ್ಲದೆ ಜೈಲು ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ಅವರನ್ನು ವರ್ಗಾವಣೆ ಮಾಡಿರುವುದರಿಂದಲೂ ಕೂಡ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸಂತೋಷ ವ್ಯಕ್ತ ಪಡಿಸಿದ್ದಾರೆ. ಇಲ್ಲೂ ಕೂಡ ಪರ-ವಿರೋಧದ ಪ್ರತಿಭಟನೆಗಳು ನಡೆದಿವೆ. ಕೃಷ್ಣಕುಮಾರ್ ಅವರ ಸ್ಥಾನಕ್ಕೆ ಡಾ.ಅನಿತಾ ಅವರನ್ನು ನೇಮಿಸಿರುವುದಕ್ಕೆ ಕೂಡ ಖೈದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿರುವ ಎಐಎಡಿಎಂಕೆ ಮುಖಂಡರಾದ ಶಶಿಕಲಾ ಅವರನ್ನು ನೋಡಿಕೊಳ್ಳುತ್ತಿದ್ದ ಡಾ.ಅನಿತಾ ಅವರು ಶಶಿಕಲಾ ಅವರಿಗೆ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ವಿಶೇಷ ಸೌಲಭ್ಯ ನೀಡಿರುವುದಕ್ಕೆ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಇಂಥವರನ್ನು ಸರ್ಕಾರ ಜೈಲು ಅಧೀಕ್ಷಕರನ್ನಾಗಿ ನೇಮಕ ಮಾಡಿದೆ. ಇವರನ್ನೂ ಕೂಡ ವರ್ಗಾವಣೆ ಮಾಡಬೇಕೆಂದು ಖೈದಿಗಳು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.  ಕಳೆದ ಒಂದು ವಾರದಿಂದ ಜೈಲಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಡಿಐಜಿ ರೂಪಾ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಪರ-ವಿರೋಧದ ಪ್ರತಿಭಟನೆ ಘೋಷಣೆಗಳು ಮೊಳಗಿದ್ದವು.

ಜೈಲಿನ ಅಕ್ರಮಗಳ ಬಗ್ಗೆ ವರದಿ, ಡಿಜಿಪಿ ಸತ್ಯನಾರಾಯಣರಾವ್ ಅವರ ಮೇಲೆ ಲಂಚ ಆರೋಪ ಮಾಡಿದ ಮೇಲೆ ಅಲ್ಲಿನ ಸಿಬ್ಬಂದಿಗಳಲ್ಲೂ ಕೂಡ ಎರಡು ತಂಡವಾಗಿದೆ. ಜೈಲಿನ ಅಕ್ರಮಗಳನ್ನು ಬಯಲಿಗೆಳೆದವರನ್ನು ಬೆಂಬಲಿಸಿದರೆಂಬ ಹಿನ್ನೆಲೆಯಲ್ಲಿ ಹಲವು ಖೈದಿಗಳನ್ನು ಥಳಿಸಿ, ಸ್ಥಳಾಂತರ ಮಾಡಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದು, ನಮ್ಮನ್ನೂ ಕೂಡ ಥಳಿಸಿಬಿಟ್ಟಾರು ಎಂಭ ಭೀತಿಯಲ್ಲಿ ಕೆಲವು ಖೈದಿಗಳಿದ್ದಾರೆ. ಒಟ್ಟಾರೆ ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿದರೂ ಜೈಲಿನಲ್ಲಿ ಪ್ರತಿಭಟನೆ, ಧಿಕ್ಕಾರದ ಘೋಷಣೆಗಳು ನಿಂತಿಲ್ಲ.

ಡಿಐಜಿ ರೂಪಾ, ಡಿಜಿಪಿ ಸತ್ಯನಾರಾಯಣರಾವ್, ಜೈಲು ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ಅವರ ಪರ-ವಿರೋಧದ ಘೋಷಣೆಗಳು ಜೈಲಿನಲ್ಲಿ ಮೊಳಗಿವೆ.ಡಾ.ಅನಿತಾ ಅವರ ವಿರುದ್ಧವೂ ಕೂಡ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಜೈಲು ಅಕ್ರಮ, ಅವ್ಯವಹಾರ ಪ್ರಕರಣದ ತನಿಖೆಯನ್ನು ನಿವೃತ್ತ ಐಎಎಸ್ ಅಧಿಕಾರಿ ವಿನಯ್‍ಕುಮಾರ್ ನೇತೃತ್ವದಲ್ಲಿ ಸಮಿತಿಗೆ ವಹಿಸಿತ್ತು.ಈ ಸಮಿತಿ ವಿಚಾರಣೆ ನಡೆಸುವ ಮುನ್ನವೇ ಅಲ್ಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವಿಚಾರಣೆಗೆ ವಿನಯ್‍ಕುಮಾರ್ ಅವರು ಆಗಮಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜೈಲನ್ನು ಸ್ವಚ್ಛಗೊಳಿಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin