ಪರಪ್ಪನ ಅಗ್ರಹಾರ ಜೈಲಲ್ಲಿ ಚಿನ್ನಮ್ಮ ಹೇಗಿದ್ದಾರೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Sasikala-Jail-Bars---01

ಬೆಂಗಳೂರು. ಫೆ.15 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅಲಿಯಾಸ್ ಚಿನ್ನಮ್ಮ ಇಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಸುಖದ ಸುಪ್ಪತ್ತಿಗೆಯಲ್ಲಿದ್ದ ಶಶಿಕಲಾ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯರಂತೆ ಇರಬೇಕಿದೆ. ಶಶಿಕಲಾ ಅವರಿಗೆ ಕೈದಿ ನಂ:10711 ಹಾಗೂ ಇಳವರಸಿ ಅವರಿಗೆ ಕೈದಿ ನಂ:10712 ನೀಡಲಾಗಿದೆ. ಅಲ್ಲದೇ ದಿನಕ್ಕೆ 50 ರೂ ನಿಗದಿ ಮಾಡಲಾಗಿದೆ.  ಒಂದು ಟಿವಿ, ಒಂದು ಹಾಸಿಗೆ, ದಿಂಬು, ಹೊದೆಯಲು ಒಂದು ಬೆಡ್‌ಶೀಟ್, ಟೇಬಲ್ ಫ್ಯಾನ್, ಮೂರು ಜೊತೆ ಬಿಳಿಯ ಸೀರೆಗಳು, ಹಾಗೂ 1 ತಟ್ಟೆ, 1 ಚೊಂಬು ಇವಿಷ್ಟೇ ಶಶಿಕಲಾಗೆ ಜೈಲಿನಲ್ಲಿ ಸಿಗುತ್ತಿರುವ ಸೌಲಭ್ಯ. ಶಶಿಕಲಾ ಅವರು ಇನ್ನಿಬ್ಬರು ಮಹಿಳಾ ಕೈದಿಗಳೊಂದಿಗೆ ಒಂದೇ ಸೆಲ್‌ನಲ್ಲಿ ಇರಬೇಕಿದೆ. ಇಬ್ಬರು ಖೈದಿಗಳುವ ಸೆಲ್ ನಲ್ಲಿ ಚಿನ್ನಮ್ಮ ಮೌನಕ್ಕೆ ಶರಣಾಗಿದ್ದಾರೆ.

ಶಶಿಕಲಾಗೆ ಮನೆ ಊಟ ಇಲ್ಲ :

ಇನ್ನು ಶಶಿಕಲಾ ನಟರಾಜನ್‌ಗೆ ಆರೋಗ್ಯ ನೆಪವೊಡ್ಡಿ ಮನೆಯಿಂದಲೇ ಊಟ ಪೂರೈಸಲು ನ್ಯಾಯಾಯಲಯದ ಮುಂದೆ ಮನವಿ ಮಾಡಲಾಗಿತ್ತು. ಆದರೆ ಕೋರ್ಟ್‌ ಇದಕ್ಕೆ ನಿರಾಕರಿಸಿದೆ. ಜೈಲಿನಲ್ಲಿ ಎಲ್ಲ ಸಾಮಾನ್ಯ ಕೈದಿಗಳಿಗೆ ಯಾವ ಆಹಾರವನ್ನು ನೀಡಲಾಗುತ್ತದೆಯೋ ಅದೇ ಆಹಾರವನ್ನೇ ಶಶಿಕಲಾ ಕೂಡ ಸೇವಿಸಬೇಕಿದೆ. ಬೆಳಿಗ್ಗೆ 6.30ಕ್ಕೆ ಲಘು ಉಪಹಾರ, ಬೆಳಿಗ್ಗೆ 11.30ಕ್ಕೆ ತಿಂಡಿ, ಸಂಜೆ 4ಕ್ಕೆ ಟೀ/ಕಾಫಿ ಹಾಗೂ ಸಂಜೆ 6.30ಕ್ಕೆ ಊಟ ಸಿಗಲಿದೆ.  ಸಜೆ ಕೈದಿಯಾಗಿರುವುದರಿಂದ ಪರಪ್ಪನ ಅಗ್ರಹಾರ ಜೈಲ್ನ ಮಹಿಳ ಬ್ಯಾರಕ್ಗೆ ಶಶಿಕಲಾ ಹಾಗೂ ಇಳವರಸಿ. ನಾಲ್ವರು ಇರುವಂತಹ ಕೊಠಡಿಯನ್ನು‌ ಸಿದ್ದ ಪಡಿಸಿದ ಜೈಲು‌‌ ಸಿಬ್ಬಂದಿ. ಎಲ್ಲಾ ಕೈದಿಗಳಿಗೆ ನೀಡುವ ಸಹಜ ಸೌಲಭ್ಯವನ್ನು‌ ಇವರಿಗು ನೀಡುವ ಮಾಹಿತಿ. ಇವರಿಗೆ ಪ್ರತ್ಯೇಕ ವಾಗಿ ಆಹಾರ, ಇತರೆ ಸೌಲಭ್ಯ ಗಳು ಬೇಕಾದಲ್ಲಿ ನ್ಯಾಯಲಯದ ಅನುಮತಿ ಪಡೆದ ನಂತರ ‌ನೀಡಲು ಅವಕಾಶವಿದೆ ಎಂದು‌ ಕೋರ್ಟ್ ಮೂಲಗಳಿಂದ ಮಾಹಿತಿ.

ದಿನಕ್ಕೆ 50 ರೂ. ಕೂಲಿ :

ಅಕ್ರಮ ಆಸ್ತಿ ಗಳಿಕೆಯ ಅಪರಾಧಿಗೆ ಜೈಲಿನಲ್ಲಿ ಸಿಗುತ್ತಿರುವ ಕೂಲಿ ಎಷ್ಟು ಗೊತ್ತಾ..? ದಿನಕ್ಕೆ ಬರೀ 50 ರೂಪಾಯಿ. ಶಶಿಕಲಾ ಜೈಲಿನಲ್ಲಿ ಸಹ ಕೈದಿಗಳಂತೆಯೇ ಬೇರೇ ಬೇರೆ ಕೆಲಸ ಮಾಡಬೇಕಿರುತ್ತದೆ. ಚಿನ್ನಮ್ಮ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೇಣದ ಬತ್ತಿ ತಯಾರಿಸಲಿದ್ದಾರೆ. ಇದಕ್ಕಾಗಿ ಜೈಲಿನ ಅಧಿಕಾರಿಗಳು ದಿನಕ್ಕೆ 50 ರೂಪಾಯಿ ಕೂಲಿ ಕೂಡ ನೀಡಲಿದ್ದಾರೆ.

ಬೆಂಗಳೂರಿಗೆ ಬಂದ ಚಿನ್ನಮ್ಮನಿಗೆ ಪ್ರತಿಭಟನೆಯ ಬಿಸಿ : 

ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಆಗಮಿಸಿದ ವೇಳೆಯೇ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಶಶಿಕಲಾ ಬೆಂಬಲಿಗರಿದ್ದ ಕೆಲ ಕಾರುಗಳ ಮೇಲೆ ಜಯಲಲಿತಾ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು. ಈ ವೇಳೆ ಶಶಿಕಲಾ ಬೆಂಬಲಿಗರಿಗೆ ಸೇರಿದ 5 ಸ್ಕಾರ್ಪಿಯೋ, 1 ಇನೋವಾ ಕಾರುಗಳು ಜಖಂಗೊಂಡಿವೆ. ಜಯಾ ಸಾವಿಗೆ ಶಶಿಕಲಾ ಕಾರಣ ಅಂತಾ ಇದೇ ವೇಳೆ ಪ್ರತಿಭಟನೆ ನಡೆಸಿದರು. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.  ಶಶಿಕಲಾ ಇಂದು ಕೋರ್ಟ್‌‌ಗೆ ಶರಣಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಪತಿ ನಟರಾಜನ್ ಕೂಡ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಕೋರ್ಟ್‌‌ನ ಕಾನೂನು ಪ್ರಕ್ರಿಯೆಗಳೆಲ್ಲಾ ನಡೆದು ಶಶಿಕಲಾ ಜೈಲಿನ ಒಳಗೆ ಹೋಗುತ್ತಿದ್ದಂತೆಯೇ ಇತ್ತ ಪತಿ ನಟರಾಜನ್ ಗಳಗಳನೆ ಕಣ್ಣೀರು ಸುರಿಸಿದರು. ಅಲ್ದೆ ಪರಪ್ಪನ ಅಗ್ರಹಾರ ಜೈಲಿನಿಂದ ಕಣ್ಣೀರಾಕುತ್ತಲೇ ಹೊರ ನಡೆದರು.

ಇನ್ನು ಶಶಿಕಲಾ ಹಾಗೂ ಇಳವರಸಿಗೆ ಜೈಲಿನ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆದಿದೆ. ಇಬ್ಬರು ಅಪರಾಧಿಗಳ ಆರೋಗ್ಯದಲ್ಲಿ ಸಮಸ್ಯೆ ಬಗ್ಗೆ ನ್ಯಾಯಾಧೀಶರು ವಿಚಾರಿಸಿದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಇಬ್ಬರೂ ಆರೋಗ್ಯದಿಂದಿರುವುದಾಗಿ ಜೈಲಿನ ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin