ಪರಸ್ತ್ರೀ ಜತೆ ಇದ್ದಾಗ ಪತ್ನಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಪಿಎಂಸಿ ಸದಸ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

illegal-relationship
ಮೈಸೂರು, ಮೇ 26- ಮುಖ್ಯಮಂತ್ರಿಗಳ ಆಪ್ತ ಕೆ.ಸಿ.ಬಲರಾಮ್ ಅವರ ಪುತ್ರ ಪರಸ್ತ್ರೀಯೊಂದಿಗೆ ಇದ್ದಾಗ ಆಕೆ ಪತಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ.  ಟಿ.ನರಸೀಪುರ ತಾಲೂಕು, ಎಪಿಎಂಸಿ ಸದಸ್ಯನೂ ಆಗಿರುವ ಪ್ರಭಾಕರ್ ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಿದ್ದು, ಈಗ ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ.ನಗರದ ಆಲನಹಳ್ಳಿ ಠಾಣೆ ವ್ಯಾಪ್ತಿಯ ಜನತಾ ಕಾಲೋನಿಯ ಮನೆಯೊಂದರಲ್ಲಿ ಪರಸ್ತ್ರೀಯೊಂದಿಗೆ ಇದ್ದಾಗ ಆಕೆ ಗಂಡನಿಗೆ ಸಿಕ್ಕಿಬಿದ್ದಿದ್ದಾರೆ.
ಕೂಡಲೇ ಆತನ ಮನೆ ಬಾಗಿಲಿಗೆ ಬೀಗ ಹಾಕಿ ಪೊಲೀಸರನ್ನು ಕರೆಸಿ ರೆಡ್‍ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದಾರೆ.  ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin