ಪರಾರಿಯಾ ಕೈದಿಯನ್ನು ಹಿಡಿದು ತಂದ ಕಾರಾಗೃಹ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ಕಲಬುರಗಿ, ನ.4– ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದು, ಪತ್ತೆಯಾಗಿದ್ದಾನೆ. ಕೇಂದ್ರ ಕಾರಾಗೃಹದ ಸಿಬ್ಬಂದಿ ಈತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಕಾರಾಗೃಹದೊಳಗಿನ ಕಾಂಪೌಂಡ್ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೈದಿ ಮಹೇಶ್ ತೆಲಂಗಾಣ ರಾಜ್ಯದ ನಾರಾಯಣಪೇಟ್ ಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ಜೈಲು ಸಿಬ್ಬಂದಿ ಹಿಡಿದು ತಂದಿದ್ದಾರೆ.  ಮಹೇಶ್ ಎಂಬ ಸಜಾ ಬಂದಿ ಕೊಲೆ ಪ್ರಕರಣದಲ್ಲಿ 12 ವರ್ಷ ಶಿಕ್ಷೆಗೊಳಗಾಗಿದ್ದ. ಕಲಬುರಗಿ ನಗರ ನಿವಾಸಿಯಾಗಿದ್ದ ಈತ ನಿನ್ನೆ ಪರಾರಿಯಾಗಿದ್ದ.

ಕಳೆದ ನಾಲ್ಕು ತಿಂಗಳ ಹಿಂದಷ್ಟೆ ನಾಲ್ವರು ಕೈದಿಗಳು ತಪ್ಪಿಸಿಕೊಂಡಿದ್ದರು. ಅದರಲ್ಲಿ ಓರ್ವ ಕೈದಿ ಮಾತ್ರ ಸ್ವ ಇಚ್ಛೆಯಿಂದ ಕಾರಾಗೃಹಕ್ಕೆ ವಾಪಸಾಗಿದ್ದನು.  ಇನ್ನುಳಿದ ಮೂವರು ಕೈದಿಗಳು ಇದುವರೆಗೆ ಪತ್ತೆಯಾಗಿಲ್ಲ. ಪರಹತ್ತಬಾದ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin