ಪರಿಷ್ಕoತ ನೋಂದಣಿ ಶುಲ್ಕ : ಉಪ ನೋಂದಣಾಧಿಕಾರಿ ನರಸಿಂಹಯ್ಯ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

kr-pete2

ಕೆ.ಆರ್.ಪೇಟೆ, ಮಾ.2– ಮೌಲ್ಯಮಾಪನಾ ಉಪ ಸಮಿತಿಯ ನಿರ್ಣಯದಂತೆ ನೋಂದಣಿ ಶುಲ್ಕ ಪರಿಷ್ಕರಿಸಿ, ನೂತನ ಶುಲ್ಕವನ್ನು ಉಪನೋಂದಣಾಧಿಕಾರಿಗಳ ಕಚೇರಿಯ ನಾಮ ಫಲಕದಲ್ಲಿ ಪ್ರಕಟಿಸಲಾಗಿರುವುದಕ್ಕೆ ಆಕ್ಷೇಪಣೆಗಳೇನಾದರು ಇದ್ದರೆ 15 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ನೀಡಲು ಉಪ ನೋಂದಣಾಧಿಕಾರಿ ನರಸಿಂಹಯ್ಯ ಮನವಿ ಮಾಡಿದರು.
ಮೌಲ್ಯಮಾಪನ ಸಮಿತಿಯ ಅಧ್ಯಕ್ಷರು ಹಾಗೂ ತಹಶಿಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್‍ಕುಮಾರ್, ಸಹಾಯಕ ಕಾರ್ಯಪಾಲ ಅಭಿಯಂತರರು ಮತ್ತು ಇತರೇ ಸದಸ್ಯರೆ ನೇತೃತ್ವದಲ್ಲಿ ಪರಿಷ್ಕರಿಸಿರುವ ಪಟ್ಟಿಯನ್ನು ಬಿಡುಗೆಡೆ ಮಾಡಿ ಮಾತನಾಡಿದರು.ಕರ್ನಾಟಕ ಮುದ್ರಾಂಕ ಇಲಾಖೆಯ ನಿಯಮದಂತೆ ಪಟ್ಟಣದ ಒಳಗೆ, ಗಡಿ ಭಾಗದಲ್ಲಿರುವ ಖಾಲಿ ನಿವೇಶನ, ಮನೆ, ವಾಣಿಜ್ಯ ಮಳಿಗೆಗಳು ಸೇರಿದಂತೆ ತಾಲೂಕಿನಲ್ಲಿರುವ ಕೃಷಿ ಭೂಮಿ, ಖಾಲಿ ನಿವೇಶನ, ಮನೆಗಳು ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸಲಾಗಿದೆ.ಸದರಿ ಪಟ್ಟಿಯನ್ನು ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಖುದ್ದು ಹಾಜರಾಗಿ ಪರಿಶೀಲನೆ ನಡೆಸಿ ತಮ್ಮ ಆಕ್ಷೇಪಣೆಗಳಿದ್ದರೆ 15 ದಿನಗಳ ಒಳಗಾಗಿ ತಿಳಿಸುವಂತೆ ಸೂಚಿಸಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin