ಪರಿಸರ ಮಂತ್ರ ಜಪಿಸಿದ ಚಿನ್ನಾರಿಗಳು : ಬೇಸಿಗೆ ಶಿಬಿರದಲ್ಲಿ ಸಸಿ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

gudibande

ಗುಡಿಬಂಡೆ, ಮೇ 17- ಆಟ ಊಟ, ಮನೋರಂಜನೆ, ಸಾಹಿತ್ಯಾತ್ಮಕ ಮತ್ತು ಸೃಜನಾತ್ಮಕ ಕಲೆ ಕಲಿಕೆಯ ನಡುವೆ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರದ 5ನೇ ದಿನ ಶಿಬಿರದ 138 ಪುಟಾಣಿಗಳು ಪರಿಸರ ಮತ್ತು ಪುಟಾಣಿಗಳು ಎಂಬ ಜಾಗೃತಿ  ಸಂದೇಶ ಸಾರುವ ಚಟುವಟಿಕೆಗಳಲ್ಲಿ ಭಾಗವಹಿಸಿ ಪರಿಸರದೊಂದಿಗೆ ಕಾಲ ಕಳೆದು ಪರಿಸರ ಸಂರಕ್ಷಣೆ ಮತ್ತು ಹಸಿರು ಸಮೃದ್ಧಿ ಮಂತ್ರ ಜಪಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಬಿಸಿಎಂ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 10 ದಿನಗಳ 2016-17ನೇ ಸಾಲಿನ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರದಲ್ಲಿ 5ನೇ ದಿನ ಶಿಬಿರದ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಜಿಲ್ಲಾ ಸಮಿತಿ ಸದಸ್ಯ ಗುಂಪು ಮರದ ಆನಂದ್ ಮಾತನಾಡಿ, ಉತ್ತಮ ಪರಿಸರದ ನಡುವೆ ಜೀವಿಸುವುದು ನಮ್ಮೆಲ್ಲರ ಹಕ್ಕು, ಪುಟಾಣಿಗಳು ಸಸಿಗಳನ್ನು ನೆಡುವ ಮತ್ತು ಅವುಗಳನ್ನು ಪೋಷಿಸುವ  ಹವ್ಯಾಸ ಬಾಲ್ಯದಿಂದಲೆ ಬೆಳೆಸಿಕೊಳ್ಳಬೇಕು ಎಂದರು.

ಸಾಲು ಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಆದರ್ಶ, ತಾಲ್ಲೂಕಿನ ಪುಟಾಣಿಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಅವರ ಶೈಕ್ಷಣಿಕ ಮಟ್ಟವನ್ನು ಉತ್ತಮಪಡಿಸಲು ವಿವಿದ ಇಲಾಖೆಗಳೊಂದಿಗೆ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘವು ಕೈಜೋಡಿಸಿರುವುದು ಉತ್ತಮ ಕಾರ್ಯ ಎಂದರು.ತಾಲ್ಲೂಕು ಬಿ.ಸಿ.ಎಂ ವಿಸ್ತರಣಾಧಿಕಾರಿ ಕೆ.ವಿ.ರಾಮಯ್ಯ ಮಾತನಾಡಿ, ಮಕ್ಕಳು ತಮ್ಮ ಮನೆಯ ಪಕ್ಕದಲ್ಲಿ ಲಭ್ಯವಿರುವ ಖಾಲಿ ಸ್ಥಳದಲ್ಲಿ ಹಣ್ಣು ಹಂಪಲುಗಳ, ಹೂವು ತರಕಾರಿ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗುವ ಸಸಿಗಳನ್ನು ನೆಡುವ ಮತ್ತು ಅನಗತ್ಯವಾಗಿ ಪೋಲಾಗುವ  ನೀರನ್ನು ಅಂತಹ ನೀರನ್ನು ಗಿಡಗಳಿಗೆ ಹಾಯಿಸಿ, ಕೈತೋಟ ಮಾಡಿ ಎಂದು ಸಲಹೆ ಮಾಡಿದರು.

ಚಿತ್ರಕಲೆ, ಸೃಜನಾತ್ಮಕ ಕಲೆಗಳಾದ ಆಟೋಟಿಕೆಗಳ ತಯಾರಿ, ಅಲಂಕಾರಿಕ ವಸ್ತುಗಳ ತಯಾರಿ, ಪೇಪರ್‍ನಲ್ಲಿ ಕಲಾತ್ಮಕ ವಸ್ತುಗಳ ತಯಾರಿ, ನೃತ್ಯ, ಏರೋಬಿಕ್ಸ್, ಯೋಗ, ಪ್ರಾಣಾಯಾಮ, ಹಾಡುಗಾರಿಕೆ, ದೇಸಿಯ ಆಟಗಳು ಸೇರಿದಂತೆ ಹಲವು ಚಟುವಟಿಕೆಗಳ ಕಲಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಬಿ.ಎನ್.ನರಸಮ್ಮ, ಶಿಬಿರದ ಆಯೋಜಕ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಜಿ.ವಿ.ವಿಶ್ವನಾಥ್, ಸಿಡಿಪಿಒ ಕಛೇರಿಯ ಮೇಲ್ವಿಚಾರಕಿಯಾದ ಸಿ.ಜೆ.ಪದ್ಮಾವತಮ್ಮ, ಶಿಬಿರದ ತರಬೇತುದಾರರಾದ ಶ್ರೀನಿವಾಸ್, ಮುನಿರಾಜು, ಮಂಜುಳ, ಸಿಡಿಪಿಒ ಕಛೇರಿಯ ಅಂಬಿಕಾ ಸೇರಿದಂತೆ ಹಲವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin