ಪರಿಸರ ಸ್ನೇಹಿಯಲ್ಲದ ಗಣೇಶಗಳಿಗೆ ಅವಕಾಶ ಇಲ್ಲ : ಮೇಯರ್ ಮಂಜುನಾಥರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ganapati

ಬೆಂಗಳೂರು, ಸೆ.2-ಈ ಬಾರಿ ಪರಿಸರ ಸ್ನೇಹಿಯಲ್ಲದ ಗೌರಿ-ಗಣೇಶ ಇಡಲು ಅವಕಾಶ ನೀಡುವುದಿಲ್ಲ ಎಂದು ಮೇಯರ್ ಮಂಜುನಾಥರೆಡ್ಡಿ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟರ್ ಆಫ್ ಪ್ಯಾರೀಸ್ ಗೌರಿ-ಗಣೇಶ ಮೂರ್ತಿಗಳನ್ನು ಇಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹಾಗಾಗಿ ಈ ಬಾರಿ ಪರಿಸರ ಸ್ನೇಹಿಯಲ್ಲದ ಮೂರ್ತಿಗಳನ್ನು ಇಡಲು ಅವಕಾಶ ನೀಡುವುದಿಲ್ಲ ಎಂದರು. ಕೆರೆ, ಕುಂಟೆಗಳಲ್ಲಿ ಬಣ್ಣದ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದರಿಂದ ನೀರು ಮಲೀನವಾಗುತ್ತದೆ. ಅದರಲ್ಲಿ ಜಲಚರಗಳು ಸಾವನ್ನಪ್ಪುತ್ತವೆ, ನೀರು ಕೊಳೆತು ಪರಿಸರ ಕಲುಷಿತಗೊಳ್ಳುತ್ತದೆ. ಸಾರ್ವಜನಿಕರೂ ಕೂಡ ಇದನ್ನರಿತು ಪಾಲಿಕೆಯೊಂದಿಗೆ ಸಹಕರಿಸಬೇಕು. ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.

ಗೌರಿ-ಗಣೇಶ ವಿಸರ್ಜಿಸಲು ಪಾಲಿಕೆ ವ್ಯಾಪ್ತಿಯ ಕೆರೆಗಳಲ್ಲಿ ಎಲ್ಲಾ ಸಿದ್ಧತೆ ಮಾಡಿದೆ. ದೊಡ್ಡ ಮೂರ್ತಿಗಳನ್ನು ವಿಸರ್ಜಿಸಲು ಕ್ರೇನ್ ವ್ಯವಸ್ಥೆ ಮಾಡಲಾಗಿದೆ. ಕೆರೆಗಳ ಬಳಿ ಪಾಲಿಕೆಯೇ ಭದ್ರತೆ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.  ತಿಂಗಳಾನುಗಟ್ಟಲೆ ಗಣೇಶ ಕೂರಿಸಿದರೆ ಮಹತ್ವ ಕಳೆದುಕೊಳ್ಳುತ್ತದೆ. ಹಾಗಾಗಿ 15 ದಿನದೊಳಗೆ ಗಣೇಶ ಉತ್ಸವಗಳನ್ನು ಮುಗಿಸಬೇಕು ಎಂದು ಕೋರಿದರು. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಶೇ.20ರಷ್ಟು ತ್ಯಾಜ್ಯ ಹೆಚ್ಚಾಗಲಿದೆ. ಇದನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೇವೆ. ಒಟ್ಟಾರೆ ಹಬ್ಬದ ಸಂದರ್ಭದಲ್ಲಿ ಕಸದ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಮಂಜುನಾಥ್‌ರೆಡ್ಡಿ ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin