ಪರಿಸರ ಸ್ನೇಹಿ ಆಟೋ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

auto

ಬೆಂಗಳೂರು, ಏ.20- ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಶುದ್ಧ ಗಾಳಿ ದೊರೆಯುವುದೇ ದುಸ್ತರವಾಗಿರುವ ಪರಿಸ್ಥಿತಿಯಲ್ಲಿ ಆಟೋ ಚಾಲಕರೊಬ್ಬರು ಮರ-ಗಿಡ ಬೆಳೆಸಲು ಮುಂದಾಗಿ ಪ್ರತಿ ಪ್ರಯಾಣಿಕರಿಗೂ ಉಚಿತವಾಗಿ ಸಸಿಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಚನ್ನಸಂದ್ರ ಲೇಔಟ್‍ನ ನಾರಾಯಣ್ ಎಂಬ ಆಟೋ ಚಾಲಕ ತಮ್ಮ ಆಟೋದಲ್ಲಿ ಸಸಿಗಳನ್ನು ಇಟ್ಟುಕೊಂಡು ಪ್ರಯಾಣಿಕರಲ್ಲಿ ಮತ್ತು ನಾಗರಿಕರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿ ಸುತ್ತಿದ್ದಾರೆ. ಗಿಡಗಳನ್ನು ಕೇವಲ ಸೌಂದರ್ಯಕ್ಕೆ ಬೆಳೆಸಬಾರದು. ಆರೋಗ್ಯದ ದೃಷ್ಟಿಯಿಂದಲೂ ಗಿಡ-ಮರಗಳನ್ನು ಬೆಳೆಸಬೇಕು.ಅತಿಯಾದ ಅರಣ್ಯನಾಶ ಮತ್ತು ವಾಯು ಮಾಲಿನ್ಯದಿಂದ ಶುದ್ಧ ಗಾಳಿ ದೊರೆಯದಂತಾಗಿದೆ. ನಾವು ಉಸಿರಾಡಿದ ಗಾಳಿಯನ್ನು ನಾವೇ ಸೇವಿಸುವಂತಹ ದುಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಉದ್ಯಾನನಗರಿಯ ಹೆಸರು ಉಳಿಸಲು ಮತ್ತಷ್ಟು ಮರ-ಗಿಡಗಳನ್ನು ಬೆಳೆಸುವ ಚಿಕ್ಕ ಪ್ರಯತ್ನ ಮಾಡುತ್ತಿದ್ದಾರೆ.  ಈಗಾಗಲೇ ಸ್ವಂತ ಖರ್ಚಿನಲ್ಲೇ ಆಟೋದಲ್ಲಿ ಪ್ರಯಾಣಿಸುವವರಿಗೆ ಸಸಿಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಎಲ್ಲರೂ ಕೈ ಜೋಡಿಸಿದರೆ ಉತ್ತಮ ಪರಿಸರ ನಿರ್ಮಾಣ ಮಾಡಬಹುದು ಎಂಬುದು ಇವರ ಬಯಕೆ.

ಈಗಾಗಲೇ ಇವರು ಬೀದಿಬದಿ ಪಾನಿಪುರಿ, ಗೋಬಿ ಮಂಚೂರಿ ಸೇರಿದಂತೆ ಇತರೆ ತಿನಿಸುಗಳ ಮಾರಾಟದ ಅಂಗಡಿಗಳ ಬಳಿ ಪೋಲಾಗುವ ನೀರಿನ ಜಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು. ಸ್ವಂತ ಖರ್ಚಿನಲ್ಲಿ ಸಸಿಗಳನ್ನು ವಿತರಿಸಲು ಆರ್ಥಿಕ ಹೊರೆಯಾಗು ತ್ತಿದ್ದು, ಆಸಕ್ತಿಯುಳ್ಳ ಪರಿಸರ ಪ್ರೇಮಿಗಳು ಸಸಿಗಳನ್ನು ಕೊಡಿಸಿದರೆ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin