ಪರಿಸರ ಸ್ನೇಹಿ ಗಣೇಶನ ಪ್ರತಿಷ್ಟಾಪನೆಗೆ ಡಿಸಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

CHIKKAMANGALURU

 

ಚಿಕ್ಕಮಗಳೂರು, ಆ.27- ಸೆಪ್ಟಂಬರ್‍ನಲ್ಲಿ ಆಚರಿಸಲಾಗುವ ಗಣೇಶ ಚತುರ್ಥಿಗೆ ಅಗತ್ಯವಿರುವ ಗಣೇಶನ ವಿಗ್ರಹಗಳನ್ನು ಪರಿಸರ ಸ್ನೇಹಿಯಾಗಿ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿ ಜಿ. ಸತ್ಯವತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಹಬ್ಬದಲ್ಲಿ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಹಾಗೂ ಬಣ್ಣದ ವಿಗ್ರಹಗಳನ್ನು ಕೆರೆ ಅಥವಾ ಜಲಮೂಲಗಳ ನೀರಿನಲ್ಲಿ ವಿಸರ್ಜಿಸುವುದರಿಂದ ಅದನ್ನೇ ಅವಲಂಬಿತವಾದ ಪ್ರಾಣಿ ಪಶುಗಳು ಹಾಗೂ ಇತರೆ ಜಲಚರಗಳ ಜೀವಕ್ಕೆ ಅಪಾಯ ಉಂಟಾಗಲಿದೆ ಎಂದು ತಿಳಿಸಿದರು.
ಪರಿಸರಕ್ಕೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆಯಾಗುವಂತಹವುಗಳನ್ನು ತಡೆಯುವುದು ಅವಶ್ಯ ಇರುತ್ತದೆ. ಸೀಸೆ ಹಾಗೂ ಇತರ ಭಾರ ಲೋಹ ರಹಿತವಾದ ಹಾಗೂ ರಾಸಾಯನಿಕ ಬಣ್ಣಲೇಪಿತವಾಗದೆ ಇರುವ ವಿಗ್ರಹಗಳನ್ನು ಬಳಕೆಮಾಡಬಾರದು ಎಂದು ಕರೆ ನೀಡಿದರು. ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣಪತಿ ವಿಗ್ರಹ ಪೆಂಡಲ್‍ಗಳಲ್ಲಿ 55 ಡೆಸಿಬಲ್‍ಗಿಂತ ಹೆಚ್ಚು ಶಬ್ದ ಹೊರಡಿಸುವ ಧ್ವನಿ ವರ್ಧಕಗಳ ಬಳಕೆ ಮಾಡಬಾರದು ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಅವುಗಳ ಬಳಕೆ ನಿರ್ಬಂಧಿಸಲಾಗಿದೆ ಎಂದರು.
ಪೂಜಿಸಲ್ಪಡುವ ಗಣಪತಿಗಳ ವಿಸರ್ಜನೆಯನ್ನು ಚಿಕ್ಕಮಗಳೂರಿನ ಬಸವನ ಹಳ್ಳಿ ಕೆರೆ, ಬೀರೂರಿನ ಬಾಕಿನಕೆರೆ, ಕಡೂರಿನ ಕೆ.ಹೊಸಳ್ಳಿ ಕೆರೆ, ಕೊಪ್ಪದ ಗೌರಿಕೆರೆ, ನ.ರಾ.ಪುರ ಶಿವಮೊಗ್ಗ ರಸ್ತೆ ಕೆರೆಗಳಲ್ಲಿ ಸ್ಥಳೀಯ ಸಂಸ್ಥೆಗಳನ್ನು ನಿಗಧಿಪಡಿಸುವ ಸ್ಥಳಗಳಲ್ಲಿ ವಿಸರ್ಜಿಸಬೇಕೆಂದರು.ಅಪರ ಜಿಲ್ಲಾಧಿಕಾರಿ ಎಂ. ಎಲ್ ವೈಶಾಲಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ್, ಪರಿಸರ ಮಾಲಿನ್ಯಾಧಿಕಾರಿ ರಮೇಶ್, ವಾರ್ತಾಧಿಕಾರಿ ಬಿ. ಮಂಜುನಾಥ್ ನಗರ ಸಭೈ ಆಯುಕ್ತ ಆನಂದ್, ಯೋಜನಾ ನಿರ್ದೇಶಕರಾದ ರವಿಕುಮಾರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin