ಪರ್ಯಾಯ ಸಂಶೋಧನೆಗಳು ಉತ್ತಮ ಬೆಳವಣಿಗೆಯಲ್ಲ : ಕೃಷ್ಣಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

KrishnaByregowda
ಬೆಂಗಳೂರು, ಜ.13- ದೇಶದಲ್ಲಿ ಇಂದು ನಿರೀಕ್ಷಿತ ಮಟ್ಟದ ಸಂಶೋಧನೆಗಳು ನಡೆಯದೆ ನೂತನ ಸಂಶೋಧನೆಗಳಿಗಿಂತ ಪರ್ಯಾಯ ಸಂಶೋಧನೆಗಳು ಹೆಚ್ಚಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ರಂಗೋಲಿ ಮೆಟ್ರೋ ಕಲಾಕೇಂದ್ರ, ಬಿರ್ಲಾ ಇನ್ಸ್‍ಟಿಟ್ಯೂಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಕಾಲೇಜು ಮಾರುಕಟ್ಟೆ ವಸ್ತು ಪ್ರದರ್ಶನದ ವೇಳೆ ಮಾತನಾಡಿದ ಅವರು, ರಷ್ಯಾ ಅತ್ಯುನ್ನತ ಸ್ಥಾನಕ್ಕೇರಲು ನಿರಂತರವಾಗಿ ಹಾಗೂ ಹೊಸ ಹೊಸ ಆವಿ ಷ್ಕಾರಗಳೇ ಕಾರಣ.   ಆದರೆ, ನಮ್ಮಲ್ಲಿ ಬೇರೆಯವರು ಸಂಶೋಸಿದ ವಿಷಯಗಳನ್ನೇ ಆಧರಿಸಿ ಅದರ ಅದಲು ಬದಲು ಮಾಡಿಕೊಂಡು ಸಂಶೋಧನೆ ಮಾಡುತ್ತಿರುವುದು ಸರಿಯಲ್ಲ. ನೂತನ ಆವಿಷ್ಕಾರಗಳಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಇಂತಹ ಸಂಶೋಧನೆಗಳಿಂದ ಸಾಕಷ್ಟು ಉಪಯೋಗಗಳೂ ಆಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ದಿಕ್ಕು ಬದಲಾಗುತ್ತಿದೆ. ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಉಳಿದ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾಣಬೇಕಿದೆ ಎಂದು ಹೇಳಿದರು.  ಸಂಶೋಧನೆಗಳಿಂದ ಬಡತನ ನಿರ್ಮೂಲನೆಯಂತಹ ಸಮಸ್ಯೆ ಸೇರಿದಂತೆ ಅದೆಷ್ಟೋ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅಂದು ಸೂಪರ್ ಕಂಪ್ಯೂಟರ್ ಎರಡು ಕೊಠಡಿಗಳನ್ನು ಆಕ್ರಮಿಸಿಕೊಳ್ಳುವಷ್ಟು ದೊಡ್ಡದಾಗಿತ್ತು. ಆದರೆ, ಇಂದು ಕಂಪ್ಯೂಟರ್‍ನಲ್ಲಿ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಸ್ಮಾರ್ಟ್‍ಫೋನ್‍ಗಳಲ್ಲಿ ಮಾಡುವಂತಾಗಿದೆ. ಇದು ಒಂದು ಉತ್ತಮ ಬೆಳವಣಿಗೆ. ಇದೇ ಮಾದರಿಯಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.

ಏನೇ ಕೆಲಸ ಮಾಡಿದರೂ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಮಾಡಬೇಕು. ಈ ಬಗ್ಗೆ ನನ್ನ ಶಿಕ್ಷಕರೊಬ್ಬರು ನನಗೆ ಆಟೋಗ್ರಾಫ್‍ನಲ್ಲಿ ಹೇಳಿದ್ದರು. ರೈಲ್ವೆ ನಿಲ್ದಾಣದಲ್ಲಿ ಕಸ ಗುಡಿಸಿದರೂ ಪರವಾಗಿಲ್ಲ. ಆದರೆ ಆ ರೈಲ್ವೆ ನಿಲ್ದಾಣ ವಿಶ್ವದಲ್ಲೇ ಸ್ವಚ್ಛತೆಗೆ ಹೆಸರುವಾಸಿಯಾಗುವಂತಾಗಬೇಕು. ಆ ಮಟ್ಟದಲ್ಲಿ ಯಾವುದೇ ಒಬ್ಬ ವ್ಯಕ್ತಿ ಏನೇ ಕೆಲಸ ಮಾಡಿದರೂ ಪರಿಪೂರ್ಣವಾಗಿ ಮಾಡಿ ಯಶಸ್ಸು ಸಾಸುವಂತಾಗಬೇಕು. ಈ ಪದಗಳ ಅರ್ಥ ನಮಗೆ ಆಗ ಆಗಿರಲಿಲ್ಲ. ನಂತರ ತಿಳಿಯಿತು ಎಂದು ಸ್ಮರಿಸಿಕೊಂಡರು.  ಡಿಎನ್‍ಎ ನ್ಯಾಪಿಂಗ್‍ನಂತಹ ಪರೀಕ್ಷೆಗೆ ಮೊದಲು ಸಾವಿರಾರು ಮಂದಿ ಸಾವಿರಾರು ರೂ. ಖರ್ಚು ಮಾಡುತ್ತಿದ್ದರು. ಆದರೆ, ಈಗ ಒಂದೇ ಒಂದು ಬ್ಲಡ್ ಸ್ಯಾಂಪಲ್ ನೀಡಿದರೆ ಸಾಕು, ಅಂತಹ ಸಂಶೋಧನೆಗಳು ನಡೆದಿವೆ. ವೈದ್ಯಕೀಯ ಲೋಕದ ಇಂತಹ ಉನ್ನತ ಮಟ್ಟದ ಸಂಶೋಧನೆಗಳಿಂದ ಮನುಷ್ಯ ಇಂದು 120 ವರ್ಷ ಬದುಕುವಂತಾಗಿದೆ. ನಮ್ಮಲ್ಲಿರುವ ಸಾಮಥ್ರ್ಯ ಬಳಸಿಕೊಂಡರೆ ಅಗಾಧವಾದುದನ್ನು ಸಾಸಬಹುದು. ಹಣದ ಹಿಂದೆ ನಾವು ಹೋಗಬಾರದು. ನಮ್ಮ ಕೆಲಸದಿಂದ ಹಣ ಹುಡುಕಿಕೊಂಡು ಬರಬೇಕು ಎಂದು ಕಿವಿಮಾತು ಹೇಳಿದರು.  ಬಿರ್ಲಾ ಇನ್ಸ್‍ಟಿಟ್ಯೂಟ್ ನಿರ್ದೇಶಕ ವಿಶ್ವನಾಥ್, ಡಾ.ಹೇಮಂತ್‍ಕುಮಾರ್, ಭಾರತೀಯ ವಿದ್ಯಾಭವನದ ಅಶೋಕ್‍ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin