ಪವನ್ ಸ್ಟಾರ್ ಪವನ್ ಕಲ್ಯಾಣ್- ಎಚ್.ಡಿ.ಕುಮಾರಸ್ವಾಮಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Pawan

ಹೈದರಾಬಾದ್ ಆ.20 : ಆಂಧ್ರಪ್ರದೇಶ ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ತೆಲುಗು ಚಿತ್ರ ನಟ ಪವನ್ ಕಲ್ಯಾಣ್ ಅವರು ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೈದರಾಬಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಜನಸೇನಾ ಪಕ್ಷದ ಮುಖ್ಯಸ್ಥ, ನಟ  ಪವನ್ ಕಲ್ಯಾಣ್ ಹೈದರಾಬಾದ್ ನಲ್ಲಿ ಶನಿವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂಬರುವ ವಿಧಾನ ಸಭೆ ಚುನಾವಣೆಯ ಕುರಿತಂತೆ ಕುಮಾರಸ್ವಾಮಿ ಪವನ್ ಅವರನ್ನು ಭೇಟಿಯಾದರು ಎಂದು ಹೇಳಲಾಗುತ್ತಿದೆ. ಕರ್ನಾಟಕ-ಆಂಧ್ರ ಗಡಿಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ,ತುಮಕೂರು,ಚಿತ್ರದುರ್ಗ,ಬಳ್ಳಾರಿ,ರಾಯಚೂರಿನಲ್ಲಿ ತೆಲುಗು ಭಾಷಿಕರು ಸಾಕಷ್ಟಿರುವುದರಿಂದ ಹೆಚ್ ಡಿಕೆ ಮುಂದಾಲೋಚನೆ ಲೆಕ್ಕಾಚಾರ ಹಾಕಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವನ್ ಮತ್ತು ಕುಮಾರಸ್ವಾಮಿ ಇದು ರಾಜಕೀಯ ಭೇಟಿಯಾಲಾ ಎಂದು ಸ್ಪಷ್ಟನೆ ನೀಡಿದರು. ಇತ್ತೀಚೆಗಷ್ಟೇ ತೆಲುಗು ಹಾಗೂ   ಕನ್ನಡ ಸಿನಿಮಾ ಇಂಡಸ್ಟ್ರಿಗೆ ಏಕಕಾಲದಲ್ಲಿ ಎಂಟ್ರಿಕೊಟ್ಟ ಮಗ ನಿಖಿಲ್ ನ ಸಿನಿಮಾಗೆ  ಹಾರೈಕೆ ಪಡೆಯಲು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ತಿಳಿಸಿದರು.

Facebook Comments

Sri Raghav

Admin