ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆಯಲ್ಲಿ 450 ಹಾಗೂ 100 ಬ್ಯಾಂಕ್ ಲಾಗ್ ಪಶುವೈಧ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  450 ಹಾಗೂ 100 ಬ್ಯಾಂಕ್ ಲಾಗ್ ಖಾಲಿ ಪಶುವೈದ್ಯಾಧಿಕಾರಿಗಳ ಎ ಗುಂಪಿನ ಹುದ್ದೆಗಳನ್ನು (ವೇತನ ಶ್ರೇಣಿ. 28100-50100) ಕರ್ನಾಟಕ ಪಶುಗೊಪನೆ ಮತ್ತು ಪಶುವೈದ್ಯಕಿಯ ಸೇವೆ (ಪಶುವೈದ್ಯಾಧಿಕಾರಿಗಳ ನೇವiಕಾತಿ ) (ವಿಶೇಷ) ನಿಯಮಗಳು 2016ರನ್ವಯ ಆಯ್ಕೆಯಾಗಿ ಪರಿಗಣಿಸಲು ಅರ್ಹ ಅಭ್ಯರ್ಥಿಗಳಿಂದ ನಿಗಧಿತ ನಮೂನೆಯಲ್ಲಿ ದ್ವಿಪ್ರತಿಗಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಈ ಪ್ರಕಟಣೆಯಲ್ಲಿ ಕಾಣಿಸಿರುವ ನಮೂನೆಯಲ್ಲಿ ಬೆರಳಚ್ಚು ಮಾಡಿದ / ಗಣಕೀಕೃತ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಕೈಬರಹದ/ಜೆರಾಕ್ಸ್ /ಮುದ್ರಿತ ಅಥವಾ ಇತರೆ ಯಾವುದೆ ಆಯ್ಕೆ ಪ್ರಾಧಿಕಾರದ / ಆಯೋಗದ ಅರ್ಜಿಗಳನ್ನು ಒಪ್ಪಲಾಗುವುದಿಲ್ಲ . ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ.

ನೇಮಕಾತಿ ವಿಧಾನ :

ಆಯ್ಕೆಯನ್ನು ಬಿ.ವಿ.ಎಸ್‍ಸಿ./ಬಿ.ವಿ.ಎಸ್‍ಸಿ ಅಂಡ್ ಎಹೆಚ್ ಪದವಿಯಲ್ಲಿ ಎಲ್ಲಾ ವರ್ಷಗಳಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ ಅರ್ಹತೆ ಆಧಾರದ ಮೇಲೆ ಹಾಗು ಮೀಸಲಾತಿಗನುಗುಣವಾಗಿ ನಡೆಸಲಾಗುವುದು.
ವಿದ್ಯಾರ್ಹತೆ  :

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ದಿನಾಂಕ : 05-04-2017 ರ ಒಳಗಾಗಿ ಅಭ್ಯರ್ಥಿಯು ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್‍ಸಿ/ಬಿ.ವಿ.ಎಸ್‍ಸಿ ಅಂಡ್ ಎಹೆಚ್ ಪದವಿಯನ್ನು ಪಡೆಯದಿರಬೇಕು ಹಾಗೂ ಅದೇ ದಿನಾಂಕ ಅಂದರೆ ದಿ : 05-04-2017 ರ ಒಳಗಾಗಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಕಾಯ್ದೆ 1984 ರ ಅಡಿಯಲ್ಲಿ ಕೆವ್ಕ್ ನೋಂದಾಣಿಯಾಗಿರಬೇಕು.

ವಯೋಮಿತಿ :

ಅಭ್ಯರ್ಥಿಗಳಿಂದ ಪೂರ್ಣಗೊಳಿಸಿದ ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಅಂತಿಮ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ನಿಗದಿತ ವರ್ಗವಾರು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಪ್ರವರ್ಗ 2ಎ, 2ಬಿ : 35ವರ್ಷಗಳು
ಪ್ರವರ್ಗ 3ಎ 3ಬಿ : 38ವರ್ಷಗಳು
ಪಜಾ, ಪಪಂ. ಪ್ರವರ್ಗ :  40ವರ್ಷಗಳು

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ಸಂಬಂಧಿಸಿದ ದಾಖಲಾತಿಗಳು / ಅಂಕಪಟ್ಟಿಗಳ ದ್ವಿಪ್ರತಿಗಳೊಂದಿಗೆ ಖುದ್ದಾಗಿ ಅಥವಾ ನೋಂದಣಿ ಅಂಚೆ ಮುಖಾಂತರ ದಿನಾಂಕ : 05-04-2017 ರ ಸಂಜೆ 5.00 ಘಂಟೆಯೊಳಗೆ “ಸದಸ್ಯ ಕಾರ್ಯದರ್ಶಿಗಳು, ಇಲಾಖಾ ಆಯ್ಕೆ ಸಮಿತಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ , ಆಯುಕ್ತರವರ ಕಾರ್ಯಾಲಯ, 2ನೇ ಮಹಡಿ, ಸರ್.ಎಮ. ವಿಶ್ವೇಶರಯ್ಯ ಚಿಕ್ಕ ಗೋಪುರ, ಡಾ :ಬಿ ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001” ಇವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ಯಾವುದೇ ಕಾರಣದಿಂದ್ದಾಗಿ ಅರ್ಜಿಯು ಇಲಾಖೆಗೆ ತಡವಾಗಿ ತಲುಪ್ಪಿಸಿದ್ದಕ್ಕಾಗಿ ಅಥವಾ ಅರ್ಜಿಯು ತಲುಪದೇ ಇರುವುದ್ದಕ್ಕಾಗಿ ಆಯ್ಕರ ಪ್ರಧಿಕಾರವು ಜವಾಬ್ದಾರಿಯಾಗಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22864441
ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೆಬ್ ವಿಳಾಸ : www.ahvs.kar.nic.in ವನ್ನು ಸಂಪರ್ಕಿಸುವುದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin