ಪಶ್ಚಿಮ ಅಫ್ಘಾನಿಸ್ತಾನದಲ್ಲಿ ವಾಯು ದಾಳಿಗೆ 12 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Aie-strike
ಕಾಬೂಲ್, ಮಾ.5-ಪಶ್ಚಿಮ ಅಫ್ಘಾನಿಸ್ತಾನದ ಫರಾಹ್ ಪ್ರಾಂತ್ಯದಲ್ಲಿ ನಡೆದ ದಾಳಿಯೊಂದರಲ್ಲಿ ನಾಲ್ವರು ಮಕ್ಕಳೂ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆಫ್ಘನ್ ನಾಗರಿಕರ ಸಾವಿಗೆ ನಿಖರ ಕಾರಣದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳು ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ನಡೆದ ಬಾಂಬ್ ಸ್ಫೋಟದಿಂದ ಈ ಸಾವು ಸಂಭವಿಸಿದೆ ಎಂದು ಫರಾಹ್‍ಪ್ರಾಂತ್ಯದ  ಗೌರ್ನರ್ ವಕ್ತಾರ ಮಹಮದ್ ನಾಸಿರ್ ಮೆಹ್ರಿ ಹೇಳಿದ್ದಾರೆ. ವಾಯು ದಾಳಿಯಿಂದಾಗಿ ತಮ್ಮ ಬಂಧುಗಳು ಮೃತಪಟ್ಟಿರುವುದಾಗಿ ನಾಗರಿಕರು ಹೇಳಿದ್ದಾರೆ.  ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

mehri

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin