ಪಶ್ಚಿಮ ಬಂಗಾಳದಲ್ಲಿ ಐವರ ಬಂಧನ : ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಶ
ಬಹರಾಂಪುರ್,ಏ.26-ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳೊಂದಿಗೆ ಸಂಬಂಧ ಹೊಂದಿದ್ದ ಐವರನ್ನು ಪಶ್ಚಿಮ ಬಂಗಾಳದ ಮುಷಿರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮುಷಿರಾಬಾದ್ ಜಿಲ್ಲೆಯ ಸಾಗರ್ ದಿಗಿ ಸಮೀಪ ನಿನ್ನೆ ದಾಳಿ ನಡೆಸಿದ ಪೊಲೀಸರು ಒಬ್ಬನನ್ನು ಬಂಧಿಸಿಆತನಿಂದ ಹಲವು ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಳ್ಳ ಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ತಿಳಿಸಿದ್ದಾರೆ.
ಬಂಧಿತ ನೀಡಿದ ಮಾಹಿತಿ ಮೇರೆಗೆ ಖಾರ್ಗ್ರಾಮ್, ಕಂಡಿ ಮತ್ತು ಲಾಲ್ಬಾಗ್ ಪ್ರದೇಶಗಳ ಮೇಲೆ ಪೊಲೀಸರು ದಾಳಿ ನಡೆಸಿ ಇನ್ನುಳಿದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ ಸ್ಪೋಟಕಗಳು, ಮದ್ದುಗುಂಡುಗಳು, ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments