ಪಾಂಡವಪುರದಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್ ಮೊಟ್ಟೆ..!

ಈ ಸುದ್ದಿಯನ್ನು ಶೇರ್ ಮಾಡಿ

Plastic-Egg

ಪಾಂಡವಪುರ, ಜೂ.10– ಪ್ಲಾಸ್ಟಿಕ್ ಮೊಟ್ಟೆ ಹಾವಳಿ ನಾಗಮಂಗಲ ಆಯ್ತು, ಇದೀಗ ಪಾಂಡವಪುರದ ಸರದಿ. ಪಟ್ಟಣದ ಶಾಂತಿನಗರ ನಿವಾಸಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ನವೀನ್ ಅವರಿಗೆ ಪ್ಲಾಸ್ಟಿಕ್ ಮೊಟ್ಟೆ ಸಿಕ್ಕಿದೆ. ಇದರಿಂದ ಪಟ್ಟಣ ಹಾಗೂ ತಾಲೂಕಿನ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ಸಂತೆಯಲ್ಲಿ ನಾಟಿ ಕೋಳಿಯ 10 ಮೊಟ್ಟೆಗಳನ್ನು ಮಂಗಳಾ ನವೀನ್‍ಕುಮಾರ್ ಖರೀದಿಸಿ ಮನೆಯಲ್ಲಿ ಮಕ್ಕಳಿಗೆ ರಾತ್ರಿ ಊಟದ ಜತೆಗೆ ನೀಡಲೆಂದು ಐದು ಮೊಟ್ಟೆಗಳನ್ನು ಬೇಯಿಸಿದಾಗ ಈ ಅಂಶ ಗೊತ್ತಾಗಿದೆ.ಮೊಟ್ಟೆ ಬೇಯಿಸುವ ವೇಳೆ ಕೆಟ್ಟದಾದ ವಾಸನೆ ಮೂಗಿಗೆ ಬಡಿದಿದೆ. ಸುಟ್ಟ ವಾಸನೆಯಿಂದ ಕೂಡಿದ್ದ ಮೊಟ್ಟೆಗಳನ್ನು ಒಡೆದು ನೋಡಿದಾಗ ಅವರಿಗೆ ಅನುಮಾನ ಬಂದಿದೆ. ಮೊಟ್ಟೆಯ ಒಳಪದರ ರಬ್ಬರ್ ಮಾದರಿ ಇದೆ. ನಂತರ ಅವುಗಳನ್ನು ಬೀಸಾಡಿದ್ದಾರೆ.  ನಂತರ ಮಂಗಳಾ ನವೀನ್‍ಕುಮಾರ್ ಉಳಿದ ಐದು ಮೊಟ್ಟೆಗಳನ್ನು ಅಕ್ಕಪಕ್ಕದ ನಿವಾಸಿಗಳಿಗೆ ತೋರಿಸುತ್ತಿದ್ದುದು ಕಂಡುಬಂತು. ಅವರ ಪತಿ ನವೀನ್‍ಕುಮಾರ್ ತಹಸೀಲ್ದಾರ್‍ಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಈ ಮೊಟ್ಟೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ಅಸಲಿಯೋ, ಇಲ್ಲ ಪ್ಲಾಸ್ಟಿಕ್ ಮೊಟ್ಟೆಯೋ ಎಂಬುದು ತಿಳಿಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin