ಪಾಂಡವಪುರ ತಾಲೂಕಿನ ಈ ರೈತನಿಗೆ 1ರೂ.ಬೆಳೆ ಪರಿಹಾರ ಕೊಟ್ಟ ಸಿದ್ದು ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Pandavapura

ಪಾಂಡವಪುರ, ಜೂ.10- ತಾಲೂಕಿನಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಹೊಂದಿದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀಡುವ ಪರಿಹಾರದಲ್ಲಿ ರೈತರ ಖಾತೆಗೆ ಸರ್ಕಾರ ಕೇವಲ 1 ರೂ. ಜಮೆ ಮಾಡಿರುವುದು ಬೆಳಕಿಗೆ ಬಂದಿದೆ.  ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಪಟೇಲ್ ದೇವೇಗೌಡರ ಪುತ್ರ ಎಚ್.ಡಿ.ಪ್ರಕಾಶ್ ಅವರ ವಿಜಯಾ ಬ್ಯಾಂಕ್‍ನ ಶಾಖೆಯಲ್ಲಿ ಉಳಿತಾಯ ಖಾತೆ ಸಂಖ್ಯೆ 117101011002873ಗೆ ಜೂ.6ರಂದು ಕಂದಾಯ ಇಲಾಖೆ ಹೆಸರಿನಲ್ಲಿ 1 ರೂ. ಜಮೆ ಮಾಡಿರುವುದು ಬೆಳಕಿಗೆ ಬಂದಿದೆ.


ಎಚ್.ಡಿ.ಪ್ರಕಾಶ್ ಅವರು ಹಾರೋಹಳ್ಳಿ ಗ್ರಾಮದ ಸರ್ವೆ ನಂ . 39/59ರಲ್ಲಿ 69 ಗುಂಟೆ ಜಮೀನಿನಲ್ಲಿ ಬೆಳೆ ನಷ್ಟವಾಗಿದ್ದು, ತಾಲೂಕು ಆಡಳಿತಕ್ಕೆ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿರಾರು ರೂ.ಬೆಳೆ ಪರಿಹಾರದ ಬದಲಿಗೆ ಕೇವಲ 1 ರೂ. ಜಮೆಯಾಗಿರುವುದರಿಂದ ದಿಗ್ಭ್ರಾಂತರಾಗಿದ್ದಾರೆ. ಇದೇ ರೀತಿ ಇನ್ನೂ ಅನೇಕ ರೈತರಿಗೆ ಇದೇ ರೀತಿ 1 ರೂ. ಜಮೆಯಾಗಿದೆ ಎನ್ನಲಾಗಿದೆ.

ಬ್ಯಾಂಕ್ ಖಾತೆಯಲ್ಲಿ 1ರೂ. ಜಮೆಯಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ರೈತರ ಖಾತೆಗೆ ಪರಿಹಾರದ ಸಂಪೂರ್ಣ ಹಣ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin