ಪಾಂಪೋರ್ ಅಟ್ಯಾಕ್ : ಕಟ್ಟಡದಲ್ಲಿದ್ದ ಉಗ್ರರಲ್ಲಿ ಓರ್ವನ ಹತ್ಯೆ, ಮುಂದುವರೆದ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

pampore01

ಶ್ರೀನಗರ ಅ.12 : ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನ ಇ.ಡಿ.ಐ. ಕಟ್ಟಡದಲ್ಲಿ ಅವಿತು ಕುಳಿತು ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರ ಪೈಕಿ ಓರ್ವ ಉಗ್ರರನನ್ನು ಸೇನೆ ಹೊಡೆದುರುಳಿಸಿದೆ.
ಉಗ್ರರನ್ನು ಸದೆ ಬಡಿಯಲು ಸೇನೆಯಿಂದ ಸತತವಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಕಟ್ಟಡದಲ್ಲಿ ಅವಿತಿರುವ ಉಗ್ರರು ಆಗಾಗ ಗ್ರೆನೇಡ್ ದಾಳಿ ನಡೆಸಿದ್ದಾರೆ. ಸೇನಾಪಡೆ ಯೋಧರು ಕಟ್ಟಡವನ್ನು ಸುತ್ತುವರೆದು, ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಅವಿತಿರುವ ಉಳಿದ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆ ಮುಂದುವರೆಸಲಾಗಿದೆ. ಕಳೆದ 3 ದಿನಗಳಿಂದ ಉಗ್ರರು ಕಟ್ಟಡದಲ್ಲಿ ಅವಿತುಕೊಂಡಿದ್ದಾರೆ. ಅವರನ್ನು ಸದೆ ಬಡಿಯಲು ಸೇನಾ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin