ಪಾಂಪೋರ್ ದಾಳಿ (3ನೇ ದಿನ) : ಇಬ್ಬರು ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Papore-0010

ಶ್ರೀನಗರ, ಅ.12-ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾಂಪೋರ್‍ನ ಸರ್ಕಾರಿ ಕಟ್ಟಡದ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿ ಅದರಲ್ಲಿ ಅವಿತಿಟ್ಟುಕೊಂಡಿದ್ದ ಇನ್ನೊಬ್ಬ ಉಗ್ರಗಾಮಿ ಭದ್ರತಾಪಡೆ ಗುಂಡಿಗೆ ಬಲಿಯಾಗಿದ್ದಾನೆ. ಇದರೊಂದಿಗೆ ಇಬ್ಬರು ಭಯೋತ್ಪಾದಕರು ಹತರಾದಂತಾಗಿದೆ.  ಪಾಂಪೋರ್‍ನ ಸರ್ಕಾರಿ ಉದ್ಯಮಶೀಲತ್ವ ಅಭಿವೃದ್ಧಿ ಸಂಸ್ಥೆ (ಇಡಿಐ) ಕಟ್ಟಡದಲ್ಲಿ ಅಡಗಿದ್ದ ಸುಮಾರು ಮೂವರು ಉಗ್ರರನ್ನು ಸದೆಬಡಿಯಲು ಕಳೆದ ಮೂರು ದಿನಗಳಿಂದ ಯೋಧರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬಹು ಅಂತಸ್ತಿನ ಕಟ್ಟಡದ ಮೇಲೆ ಭದ್ರತಾಪಡೆ ಮೋರ್ಟಾರ್ ಮತ್ತು ರಾಕೆಟ್‍ಗಳನ್ನು ಉಡಾಯಿಸಿತ್ತು.

ನಿನ್ನೆ ಮುಂದುವರಿದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾದ. ಕಳೆದ ರಾತ್ರಿಯಿಂದ ನಡೆದ ಎನ್‍ಕೌಂಟರ್‍ನಲ್ಲಿ ಎರಡನೇ ಭಯೋತ್ಪಾದಕ ಬಲಿಯಾಗಿದ್ದಾನೆಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕಟ್ಟಡದ ಒಂದು ಭಾಗವನ್ನು ಯೋಧರು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಉಗ್ರರ ಮೃತದೇಹಗಳು ಪತ್ತೆಯಾಗಿವೆ. ಕಟ್ಟಡದ ಒಳಗಿನಿಂದ ಗುಂಡಿನ ಮೊರೆತದ ಸದ್ದು ನಿಂತಿದ್ದು, ಅದರಲ್ಲಿರುವ ಎಲ್ಲ ಉಗ್ರರು ಹತರಾಗಿದ್ದಾರೆ. ಆದಾಗ್ಯೂ, ಅವಿತಿಟ್ಟುಕೊಂಡಿರುವ ಇನ್ನೊಬ್ಬ ಉಗ್ರಗಾಮಿಗೆ ಕಾರ್ಯಾಚರಣೆ ಮುಂದುವರಿದಿದೆ.

► Follow us on –  Facebook / Twitter  / Google+

Facebook Comments

Sri Raghav

Admin