ಪಾಕಿಗಳಿಂದ ಅಪ್ರಚೋದಿತ ದಾಳಿ : ಸತ್ತವರ ಸಂಖ್ಯೆ 5ಕ್ಕೆ ಏರಿಕೆ
ಜಮ್ಮು, ಅ.25- ಕಾಶ್ಮೀರ ಕಣಿವೆಯ ಜಮ್ಮು ಜಿಲ್ಲೆಯ ಅಂತಾ ರಾಷ್ಟ್ರೀಯ ಗಡಿಯಲ್ಲಿ ನಿರಂತರ ಕದನವಿರಾಮ ಉಲ್ಲಂಘಿಸಿ ಹಲವಾರು ವಲಯಗಳ ಮೇಲೆ ಪಾಕಿಸ್ತಾನಿ ಸೇನೆ ಮುಂದುವರಿಸಿರುವ ದಾಳಿಯಲ್ಲಿ ಸತ್ತವರ ಸಂಖ್ಯೆ ಐದಕ್ಕೇರಿದೆ. ಇದೇ ವೇಳೆ ರಜೌರಿ ಜಿಲ್ಲೆಯ ನೌಶೇರಾದಲ್ಲಿ ಪಾಕ್ ಯೋಧರು ಇಂದೂ ಕೂಡ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಪಾಕ್ ಯೋಧರು ನಿನ್ನೆ ನಡೆಸಿದ ದಾಳಿಯಲ್ಲಿ ಬಿಎಸ್ಎಫ್ ಯೋಧ ಸುಶೀಲ್ ಕುಮಾರ್ ಮತ್ತು ಓರ್ವ ಬಾಲಕ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ಇನ್ನಿಬ್ಬರು ಬಾಲಕರು ಮತ್ತು ಓರ್ವ ನಾಗರಿಕ ನಿನ್ನೆ ರಾತಿ ಮೃತಪಟ್ಟಿದ್ದು ಸತ್ತವರ ಸಂಖ್ಯೆ ಐದಕ್ಕೇರಿದೆ.
ನೌಶೇರಾದಲ್ಲಿ ಇಂದು ಮುಂಜಾನೆ ಸಹ ಪಾಕ್ ರೇಂಜರ್ಗಳು ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಭಾರತೀಯ ಬಿಎಸ್ಎಫ್ ಯೋಧರೂ ಪಾಕ್ ರೇಂಜರ್ಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಭಾರತದ ಕಮ್ಯಾಂಡೊಗಳ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನಿ ಸೇನಾಪಡೆಗಳು 40ಕ್ಕೂ ಹೆಚ್ಚು ಕದನ ವಿರಾಮಗಳನ್ನು ಉಲ್ಲಂಘಿಸಿವೆ.
► Follow us on – Facebook / Twitter / Google+