ಪಾಕಿಗಳಿಂದ 505 ಬಾರಿ ಕದನ ವಿರಾಮ ಉಲ್ಲಂಘನೆ, 150 ಭಯೋತ್ಪಾದಕರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Border-Firing

ನವದೆಹಲಿ/ಶ್ರೀನಗರ, ಅ.5-ಪಾಕಿಸ್ತಾನಿ ಸೇನಾಪಡೆಗಳು ಇಂದು ಕೂಡ ಕಣಿವೆ ರಾಜ್ಯ ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಕಳೆದ ನಾಲ್ಕು ದಿನಗಳಿಂದ ಪಾಕ್ ಗಡಿ ಭಾಗದ ಸೇನಾ ಮುಂಚೂಣಿ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿರಿಸಿಕೊಟ್ಟು ಗುಂಡಿನ ಮಳೆಗರೆಯುತ್ತಿದೆ. ಪೂಂಚ್ ಜಿಲ್ಲೆಯ ದಿಗ್ವರ್ ವಲಯದಲ್ಲಿ ಇಂದು ಮುಂಜಾನೆ ಪಾಕ್ ಯೋಧರು ಅಪ್ರೇರಣೆಯಿಂದ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೈನಿಕರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಅಕ್ಟೋಬರ್ 4ರವರೆಗೆ ಪಾಕಿಸ್ತಾನ 505 ಬಾರಿ ಯುದ್ಧ ವಿರಾಮ ಉಲ್ಲಂಘಿಸಿದೆ ಎಂದು ವರದಿಯೊಂದು ಹೇಳಿದೆ.

ಇದೇ ಅವಧಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಸಂದರ್ಭದಲ್ಲೇ ಗಡಿಯೊಳಗೆ ನುಸುಳಲು ಯತ್ನಿಸಿದ 14 ಉಗ್ರರನ್ನು ಹೊಡೆದುರುಳಿಸಲಾಗಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ಟೋಬರ್ 4ರವರೆಗೆ ಭದ್ರತಾಪಡೆಗಳು 150 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ವರದಿ ತಿಳಿಸಿದೆ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ 291 ಉಗ್ರರು ಸಕ್ರಿಯವಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಕಳೆದ 10 ತಿಂಗಳ ಅವಧಿಯಲ್ಲಿ 56 ಒಳನುಸುಳುವಿಕೆ ಯತ್ನಗಳು ನಡೆಸಿದಿದ್ದು, 42 ನುಸುಳುಕೋರರನ್ನು ಭಾರತೀಯ ಸೇನೆ ಕೊಂದು ಹಾಕಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Facebook Comments

Sri Raghav

Admin