ಪಾಕಿಸ್ತಾನದಲ್ಲಿ ಮಾನವ ಬಾಂಬ್ ದಾಳಿಗೆ 18 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

18-Killed

ಪೇಶಾವರ್, ಸೆ.2-ಪಾಕಿಸ್ತಾನದ ಖೈಬರ್-ಪಾಕ್ತುನ್ಕ್ವಾ ಪ್ರಾಂತ್ಯದ ಮರ್ದನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಕನಿಷ್ಠ 18 ಮಂದಿ ಮೃತಪಟ್ಟು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.   ನ್ಯಾಯಾಲಯದ ಬಳಿ ಗುಂಪೊಂದು ಜಮಾಯಿಸಿದ್ದಾಗ ಆಕ್ರಮಣಕಾರ ಹ್ಯಾಂಡ್ ಗ್ರೆನೇಡ್ ಎಸೆದು ತನ್ನ ಸೊಂಟದಲ್ಲಿದ್ದ ಬಾಂಬ್ನನ್ನು ಸ್ಟೋಟಿಸಿಕೊಂಡ. ಈ ಮಾನವ ಬಾಂಬ್ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ 18 ಮಂದಿ ಬಲಿಯಾದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತೀವ್ರ ಗಾಯಗೊಂಡ 60ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ‘

ಇದಕ್ಕೂ ಮುನ್ನ ಪಾಕಿಸ್ತಾನದ ಖೈಬರ್-ಪಾಕ್ತುನ್ಕ್ವಾ ಪ್ರಾಂತ್ಯದ ಪೇಶಾವರ್ ಜಿಲ್ಲೆಯ ವರ್ಸಕ್ ಪ್ರದೇಶದ ಕ್ರೈಸ್ತರ ಕಾಲೋನಿಗೆ ಇಂದು ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸಜಗಿದ್ದ ನಾಲ್ವರು ಆತ್ಮಾಹತ್ಯಾ ಅಕ್ರಮಣಕಾರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ನುಸುಳಿದರು. ಈ ಸಂದರ್ಭದಲ್ಲಿ ಭದ್ರತಾ ಪಡೆ ಜೊತೆ ನಡೆದ ಭೀಕರ ಗುಂಡಿನ ಚಕಮಕಿ ನಡೆಯಿತು. ಇಬ್ಬರು ಮಾನವ ಬಾಂಬರ್ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡು ಹತರಾದರೆ, ಇನ್ನಿಬ್ಬರು ಸೇನೆ ಗುಂಡಿಗೆ ಇನ್ನಿಬ್ಬರು ಉಗ್ರರು ಹತರಾದರು. ಈ ಘಟನೆಯಲ್ಲಿ ಓರ್ವ ನಾಗರಿಕ ಸಾವಿಗೀಡಾಗಿ ಅನೇಕರು ಗಾಯಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin