ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ : 13 ಸಾವು, 40 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Train-Acicdnt

ಕರಾಚಿ,ನ.3- ಎರಡು ಪ್ರಯಾಣಿಕರ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಟ 13 ಮಂದಿ ಮೃತಪಟ್ಟು ಇತರ 40 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಲಂದಿ ಪ್ರದೇಶದ ಗಡಾಸಿ ಪಟ್ಟಣದಲ್ಲಿ ಈ ದುರಂತ ಸಂಭವಿಸಿದ್ದು ಜಕಾರಿಯ ಎಕ್ಸ್‍ಪ್ರೆಸ್‍ನ ಮೂರು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ದೋಷಪೂರಿತ ಸಿಗ್ನಲ್‍ನಿಂದಾಗಿ ಫರೀದ್ ಎಕ್ಸ್‍ಪ್ರೆಸ್ ಮತ್ತು ಜಕಾರಿಯ ಎಕ್ಸ್‍ಪ್ರೆಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿತು ಎಂದು ಜಿಯೋ ವಾರ್ತಾ ಸಂಸ್ಥೆ ವರದಿ ಮಾಡಿದೆ.
ರೈಲು ಅಪಘಾತದ ಸುದ್ದಿ ತಿಳಿದ ಕೂಡಲೇ ರೈಂಜರ್‍ಗಳು ಮತ್ತು ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.

ರೈಲುಗಳ ಭಗ್ನಾವಶೇಷಗಳಡಿ ಇನ್ನು ಅನೇಕರು ಸಿಲುಕಿರುವ ಸಂಖ್ಯೆಯಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.  ಈವರೆಗೆ ಜಿಮ್ನಾ ಆಸ್ಪತ್ರೆಗೆ 13 ಮೃತ ದೇಹಗಳನ್ನು ಸಾಗಿಸಲಾಗಿದೆ ಎಂದು ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯಸ್ಥ ಡಾ.ಸೀಮಿ ಜಮಾಲಿ ತಿಳಿಸಿದ್ದಾರೆ. ಗಾಯಾಳುಗಳ ಜಿಮ್ನಾ ಆಸ್ಪತ್ರೆ, ಅಬ್ಬಾಸಿ ಸಯೀದ್ ಆಸ್ಪತ್ರೆ ಮತ್ತು ಸಿವಿಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕಳೆದ ಸೆಪ್ಟೆಂಬರ್‍ನಲ್ಲಿ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಬಳಿ ನಿಂತಿದ್ದ ಗೂಡ್ಸ್ ಟ್ರೈನ್‍ಗೆ ಕರಾಚಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು ಅಪ್ಪಳಿಸಿ, 6 ಮಂದಿ ಮೃತಪಟ್ಟು 150ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin