ಪಾಕ್ ನಲ್ಲಿ ಹಿಂದು ಉದ್ಯಮಿ ಮತ್ತು ಆತನ ಪುತ್ರನಿಗೆ ಗುಂಡಿಟ್ಟು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

firing
ಇಸ್ಲಾಮಾಬಾದ್, ಮೇ 13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ದರೋಡೆ ಯತ್ನವೊಂದರಲ್ಲಿ ಹಿಂದು ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಜೈ ಪಾಲ್ ದಾಸ್ ಮತ್ತು ಅವರ ಪುತ್ರ ಗಿರೀಶ್ ನಾಥ್ ದರೋಡೆಕೋರರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಬಲೂಚಿಸ್ತಾನದ ಹಬ್ ಜಿಲ್ಲೆಯ್ ಗಡಾನಿ ಪ್ರದೇಶದಲ್ಲಿ ನಿನ್ನೆ ಈ ಘಟನೆ ನಡೆದಿದೆ ಎಂದು ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಸಿಮೆಂಟ್ ಕಾರ್ಖಾನೆಯೊಂದರ ಬಳಿ ಅಪ್ಪ ಮತ್ತು ಮಗನನ್ನು ದರೋಡೆಕೋರರು ಸುಲಿಗೆ ಮಾಡಲು ಯತ್ನಿಸಿದರು. ಇದನ್ನು ಪ್ರತಿರೋಧಿಸಿದ ದಾಸ್ ಮತ್ತು ನಾಥ್ ಮೇಲೆ ಗುಂಡು ಹಾರಿಸಿ ಕೊಂದು ಪರಾರಿಯಾದರು. ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಹಶೀಮ್ ಹಾಗೂ ಬಲೂಚಿಸ್ತಾನ ಮುಖ್ಯಮಂತ್ರಿ ಧನಿಶ್ ಕುಮಾರ್ ಅವರ ಸಲಹೆಗಾರ ಹಿಂದು ಸಮುದಾಯವನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ಧಾರೆ.

Facebook Comments

Sri Raghav

Admin