ಪಾಕಿಸ್ತಾನದ ಹ್ಯಾಕರ್ಗಳಿಂದ ಭಾರತದ 7070 ವೆಬ್ಸೈಟ್’ಗಳು ಹ್ಯಾಕ್
ಬೆಂಗಳೂರು, ಅ.5-ಪಾಕಿಸ್ತಾನದ ಹ್ಯಾಕರ್ಗಳ ಗುಂಪೊಂದು ಭಾರತದ 7070 ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದ್ದು, ತಾವು ಹ್ಯಾಕ್ ಮಾಡಿರುವ ಸಂಸ್ಥೆಗಳ ಹೆಸರುಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಆದರೆ ಹ್ಯಾಕರ್ಗಳು ಪೆದ್ದರಾಗಿರುವ ಕಾರಣ ಆತಂತದ ಅಗತ್ಯವಿಲ್ಲ ಎಂದು ಸೈಬರ್ ಸೆಕ್ಯೂರಿಟಿ ಪರಿಣಿತರು ಹೇಳಿದ್ದಾರೆ. ಪಾಕ್ನ ರೂಕೀಗಳು (ಹ್ಯಾಕರ್ಗಳು) ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಕೆಲವು ಸಂಸ್ಥೆಗಳ 7000ಕ್ಕೂ ಹೆಚ್ಚು ವೆಬೈಸೈಟ್ಗಳನ್ನು ಹ್ಯಾಕ್ ಮಾಡಿರುವುದು ನಿಜವಾದರೂ, ಅವರು ಅಷ್ಟೇನೂ ಪರಿಣಿತರಂತೆ ಕಾಣುತ್ತಿಲ್ಲ. ಬೆದರಿಸುವ ಉದ್ದೇಶದಿಂದ ಈ ರೀತಿ ಹ್ಯಾಕ್ ಮಾಡಿದ್ದಾರೆ. ಇವರು ಸ್ಕ್ರಿಪ್ಟ್ ಕಿಡ್ಡೀಸ್ಗಳು ಅಥವಾ ಕೋಡ್ ಬಳಸಲು ಗೊತ್ತಿಲ್ಲದ ಪೆದ್ದರು ಎಂದು ಸೈಬರ್ ಪರಿಣಿತರು ಸ್ಪಷ್ಟಪಡಿಸಿದ್ದಾರೆ.
ಟಾಟಾ ಮೋಟಾರ್ಸ್, ಅಣ್ಣಾಡಿಎಂಕೆ ಮತ್ತು ತಾಜ್ಮಹಲ್ ಮೊದಲಾದ ವೆಬ್ಸೈಟ್ಗಳನ್ನು ಈ ಹಿಂದೆ ಹ್ಯಾಕ್ ಮಾಡಿದ್ದ ಮಂದಿಯೇ ಈಗಲೂ ಈ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ. ಅವರಿಗೆ ಸೈಬರ್ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲದಿರುವುದು ಅವರ ಹ್ಯಾಕಿಂಗ್ ವಿಧಾನದಿಂದಲೇ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
► Follow us on – Facebook / Twitter / Google+