ಪಾಕಿಸ್ತಾನದ 7 ಸಂಸ್ಥೆಗಳಿಗೆ ದಿಗ್ಭಂದನ ಹೇರಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Pakistan-America

ಇಸ್ಲಾಮಾಬಾದ್, ಡಿ.31-ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಕ್ಷಿಪಣಿ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ತಾನದ ಏಳು ಸಂಸ್ಥೆಗಳಿಗೆ ವಾಷಿಂಗ್ಟನ್ ದಿಗ್ಬಂಧನ ವಿಧಿಸಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆದ ಬಿದ್ದಂತಾಗಿದೆ.  ಅಹದ್ ಇಂಟರ್‍ನ್ಯಾಷನಲ್, ಏರ್ ವೇಪನ್ಸ್ ಕಾಂಪ್ಲೆಕ್ಸ್, ಎಂಜಿನಿಯರಿಂಗ್ ಸೆಲ್ಯೂಷನ್ಸ್ ಪ್ರೈ.ಲಿ., ಮಾರಿಟೈಮ್ ಟೆಕ್ನಾಲಜಿ, ಕಾಂಪ್ಲೆಕ್ಸ್ ನ್ಯಾಷನಲ್ ಎಂಜಿನಿಯರಿಂಗ್ ಅಂಡ್ ಸೈಂಟಿಫಿಕ್ ಕಮಿಷನ್, ನ್ಯೂ ಆಟೋ ಎಂಜಿನಿಯರಿಂಗ್ ಹಾಗೂ ಯೂನಿವರ್ಸಲ್ ಟೂಲಿಂಗ್ ಸರ್ವಿಸಸ್-ಅಮೆರಿಕದಿಂದ ದಿಗ್ಬಂಧನಕ್ಕೆ ಒಳಗಾಗಿರುವ ಸಪ್ತ ಸಂಸ್ಥೆಗಳು.

ಈ ಏಳು ಸಂಸ್ಥೆಗಳು ಎಕ್ಸ್ಪೋರ್ಟ್  ಅಡ್ಮಿನಿಸ್ಟ್ರೇಷನ್ ರೆಗ್ಯೂಲೇಷನ್ಸ್ (ಇಎಆರ್) ಪಟ್ಟಿಯಲ್ಲಿದ್ದವು. ಆದರೆ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಸರ್ಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಸ್ ಡಿಪಾರ್ಟ್‍ಮೆಂಟ್ ಆಫ್ ಕಾರ್ಮಸ್‍ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ತನ್ನ ಪರಮಾಣು ಮತ್ತು ಕ್ಷಿಪಣೆ ಕಾರ್ಯಕ್ರಮದಲ್ಲಿ ಇವು ದೇಶದ ಹಿತಕ್ಕೆ ವ್ಯತಿರಿಕ್ತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ವಿದೇಶಿ ನೀತಿಗಳಿಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ದಿಗ್ಬಂಧನ ಹೇರಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin