ಪಾಕಿಸ್ತಾನ ವಿಶ್ವದ ಭಯೋತ್ಪಾದನೆ ಕಾರ್ಖಾನೆ : ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Nabanitha-chakravathy

ಜಿನಿವಾ, ಮಾ.16-ಪಾಕಿಸ್ತಾನವು ವಿಶ್ವದ ಭಯೋತ್ಪಾದನೆ ಕಾರ್ಖಾನೆ ಎಂದು ಕಟು ಮಾತುಗಳಲ್ಲಿ ಟೀಕಿಸಿರುವ ಭಾರತ, ಆ ದೇಶವು ತನ್ನ ಜನರಿಗೇ ನಿರಂತರ ಹಿಂಸೆ ನೀಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧೆಡೆ ಭಾರತವು ಅಲ್ಪಸಂಖ್ಯಾತರಿಗೆ ಹಿಂಸೆ ನೀಡಿ ದೌರ್ಜನ್ಯ ಎಸಗುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತು ಅಧಿವೇಶನದಲ್ಲಿ ಸೂಕ್ತ ಪ್ರತ್ಯುತ್ತರವಾಗಿ ತಿರುಗೇಟು ನೀಡಿದೆ.

ಅಲ್ಪಸಂಖ್ಯಾತರ ವಿಷಯದಲ್ಲಿ ಪಾಕಿಸ್ತಾನವು ನಮಗೆ ಉಪದೇಶ ಮಾಡುವ ಅಗತ್ಯವಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರು ರಾಷ್ಟ್ರಪತಿಗಳಾಗಿದ್ದಾರೆ, ಉಪ ರಾಷ್ಟ್ರಪತಿಗಳಾಗಿದ್ದಾರೆ, ಕೇಂದ್ರ ಸಚಿವರಾಗಿದ್ದಾರೆ. ಸಿನಿಮಾರಂಗದ ಸೂಪರ್‍ಸ್ಟಾರ್‍ಗಳಾಗಿದ್ದಾರೆ. ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ, ಉನ್ನತಾಧಿಕಾರಿಗಳಾಗಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಇಂಥ ಅವಕಾಶ ನೀಡಲಾಗಿದೆಯೇ ಎಂದು ಭಾರತೀಯ ಪ್ರತಿನಿಧಿ ನವನೀತಾ ಚಕ್ರವರ್ತಿ ಪ್ರಶ್ನಿಸಿದರು.  ಪಾಕಿಸ್ತಾನದಲ್ಲಿ ಅಹಮದೀಯರು, ಶಿಯಾಗಳು, ಹಿಂದುಗಳು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರಿಗೆ ನಿರಂತರ ಕಿರುಕುಳ ನೀಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರು ತಿರುಗೇಟು ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin