ಪಾಕಿಸ್ತಾನ ಸೇನೆಗೆ ಮಹತ್ವದ ಮಾಹಿತಿ ರವಾನಿಸುತ್ತಿದ್ದ ಗೂಢಚಾರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrest-01

ಜಮ್ಮು, ಅ.22-ಭಾರತದ ಗಡಿ ಭದ್ರತಾಪಡೆಗಳ ನಿಯೋಜನೆ ಮತ್ತು ಚಲನವಲನಗಳ ಬಗ್ಗೆ ಪಾಕಿಸ್ತಾನಕ್ಕೆ ಮಹತ್ದ ಮಾಹಿತಿಗಳನ್ನು ರವಾನಿಸುತ್ತಿದ್ದ ಪಾಕ್ ಬೇಹುಗಾರನೊಬ್ಬನನ್ನು ಕಾಶ್ಮೀರಿ ಕಣಿವೆಯಲ್ಲಿ ಸೆರೆ ಹಿಡಿಯಲಾಗಿದೆ. ಈತನ ಬಂಧನದೊಂದಿಗೆ ಭಾರತೀಯ ಸೇನೆ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ದಾಳಿ ತಪ್ಪಿದಂತಾಗಿದೆ.  ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಬೋಧ್ ರಾಜ್ ಎಂಬ ಪಾಕಿಸ್ತಾನದ ಗೂಢಚಾರನನ್ನು ಬಂಧಿಸಲಾಗಿದ್ದು, ಆತನಿಂದ ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‍ಗಳು, ಭಾರತೀಯ ಭದ್ರತಾಪಡೆಗಳ ನಿಯೋಜನೆ ಸ್ಥಳಗಳನ್ನು ತೋರಿಸುವ ನಕ್ಷೆ, ಭಾರತದಲ್ಲಿ ತಯಾರಾದ ಎರಡು ಮೊಬೈಲ್ ಫೋನ್‍ಗಳು, ಒಂದು ಮೊಮೊರಿ ಕಾರ್ಡ್ ಮತ್ತು 1711 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಜಿಲ್ಲೆಯ ಚಾಂಗಿಯಾ ಗ್ರಾಮದ ಬೋಧ್ ರಾಜ್ ಎಂಬಾತ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಮತ್ತು ಭಾರತೀಯ ಸೇನೆಯ ನಿಯೋಜನೆ ಮತ್ತು ಚಲನವಲನಗಳ ಬಗ್ಗೆ ಮಹತ್ವ ಸಂದೇಶಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾನೆ ಎಂಬ ಬಗ್ಗೆ ಮಿಲಿಟರಿ ಗುಪ್ತಚರ ಸಂಸ್ಥೆಯಿಂದ ನಿಖರ ಮಾಹಿತಿ ಲಭಿಸಿತು. ಸಾಂಬಾದ ರಾಮಗಢ್ ಸೆಕ್ಟರ್‍ನಲ್ಲಿ ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು ಎಂದು ಸಾಂಬಾ ವಲಯದ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಸಿಂಗ್ ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ರಾಜ್ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದವಾಗಿ ಓಡಾಗುತ್ತಿದ್ದ. ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪೊಲೀಸರು ಆತನನ್ನು ಬೆನ್ನಟ್ಟಿ ಬಂಧಿಸಿದರು. ಗೂಢಚಾರನಿಂದ ಮಹತ್ವದ ಸಂಗತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin